ಕೂಡ್ಲಿಗಿ ಕಥನಗಳು

Author : ಭೀಮಣ್ಣ ಗಜಾಪುರ

Pages 184

₹ 175.00




Year of Publication: 2019
Published by: ಕಾವ್ಯ ಪ್ರಕಾಶನ
Address: ಗಜಾಪುರ, ಕೂಡ್ಲಿಗಿ ತಾ, ಬಳ್ಳಾರಿ ಜಿ.

Synopsys

ಕೂಡ್ಲಿಗಿ ಕಥನಗಳು ಕೂಡ್ಲಿಗಿ ತಾಲ್ಲೂಕಿನ ಇತಿಹಾಸ, ವಿಭಿನ್ನತೆಯನ್ನು ವಿವರಿಸುವ ಕೃತಿಯಾಗಿದೆ. ಕವಿ ಕಾಣದನ್ನು ರವಿ ಕಂಡ ಎನ್ನುವಂತೆ ಪತ್ರಕರ್ತ ಭೀಮಮ್ಮ ಅವರು ಕೂಡ್ಲಿಗಿಯ ಬದುಕು ಬರಹಗಳು, ಕೂಡ್ಲಿಗಿಯ ಬಗ್ಗೆ ವಿಶೇಷವಾದ ವಿಷಯಗಳನ್ನು ತಿಳಿಸಿದ್ದಾರೆ. ಬಳ್ಳಾರಿ, ಕೂಡ್ಲಿಗಿ ಎಂದರೆ ಬಯಲುಸೀಮೆ ಎಂಬುದು ಎಲ್ಲರಿಗೂ ತಿಳಿದಿದೆ. ಆದರೆ ಕೂಡ್ಲಿಗಿ ಪರಿಸರದ ಬಗ್ಗೆ ತಿಳಿದುಕೊಳ್ಳಲು ಈ ಕೃತಿ ಮುಖ್ಯವಾಗುತ್ತದೆ. ಏಷ್ಯಾದಲ್ಲಿಯೇ ಅತಿ ಹೆಚ್ಚು ಕರಡಿಗಳಿರುವ ತಾಲ್ಲೂಕು ಕೂಡ್ಲಿಗಿ. ಈ ಬಗ್ಗೆ ಅಲ್ಲಿನ ವಾಸಿಗಳಿಗೆ ಅರಿವಿಲ್ಲ. ಇಂತಹ ನೂರಾರು ಅಚ್ಚರಿಯ ವಿಷಯಗಳು ಈ ಕೃತಿಯಲ್ಲಡಗಿವೆ. ಲೇಖಕರ ಸರಳ ಭಾಷಾ ಶೈಲಿ ಓದುಗರನ್ನು ಹಿಡಿದಿಡುತ್ತದೆ. ಲೇಖಕರು ಕನ್ನಡ ದಿನಪತ್ರಿಕೆಗೆ ವಿವಿಧ ಸಮಯಗಳಲ್ಲಿ ಬರೆದಿದ್ದ ನುಡಿಚಿತ್ರಗಳ ಸಂಗ್ರಹಿತ ರೂಪ ಇದಾಗಿದೆ. 

About the Author

ಭೀಮಣ್ಣ ಗಜಾಪುರ
(25 July 1977)

ಪತ್ರಕರ್ತ, ಬರಹಗಾರ ಭೀಮಣ್ಣ ಗಜಾಪುರ ಅವರು ಜನಿಸಿದ್ದು 1977 ಜುಲೈ 25ರಂದು. ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲ್ಲೂಕಿನ ಗಜಾಪುರದವರು. ಇವರು ಪ್ರಸ್ತುತ ಕೊಟ್ಟೂರಿನಲ್ಲಿ ನೆಲೆಸಿದ್ದಾರೆ. ಕಳೆದ ಎರಡು ದಶಕಗಳಿಂದ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿರುವ ಭೀಮಣ್ಣ ಅವರ ಪ್ರಮುಖ ಕೃತಿಗಳೆಂದರೆ ಬಯಲು ಸೀಮೆಯ ರೈತರ ಯಶೋಗಾಥೆಗಳು, ಕೊಟ್ಟೂರ ದೊರೆ, ಸದ್ಧರ್ಮ ಸುಧೆ, ಬಿಸಿಲು ಬಸಿರು, ನೋವಿನ ಬಣ್ಣಗಳು, ಕನಸುಗಳಿಗೆ ರೆಕ್ಕೆ ಕಟ್ಟಿದವರು ಇವರ ಪ್ರಮುಖ ಕೃತಿಗಳಾಗಿವೆ.   ...

READ MORE

Related Books