‘ಕರ್ನಾಟಕ ಪಾಳೆಗಾರರ ನ್ಯಾಯಾಡಳಿತ’ ಕೃತಿಯು ಲಕ್ಷಣ್ ತೆಲಗಾವಿ ಅವರ ಗ್ರಂಥ. ಇಲ್ಲಿ ತಿಳಿಸಿರುವ ಇತಿಹಾಸದ ವಿಚಾರಗಳು ಪಾಳೇಗಾರರ ಬದುಕಿನ ಚಿತ್ರಣವನ್ನು ನೀಡುತ್ತದೆ. ಕರ್ನಾಟಕ ಪಾಳೆಯಗಾರರ ನ್ಯಾಯಾಡಳಿತ ಕುರಿತ ವಿಶಿಷ್ಟ ಗ್ರಂಥ ಇದಾಗಿದೆ. ಪಾಳೆಯಗಾರರ ಹಾಗೂ ಸ್ಥಳೀಯ ಅರಸರ ಬೆಳಕಿಗೆ ಬರದೇ ಇದ್ದ ' ನ್ಯಾಯದಾನ ಪದ್ಧತಿ ' ಯನ್ನು ಮೊಟ್ಟ ಮೊದಲಿಗೆ ದಾಖಲಿಸುವ ಪ್ರಯತ್ನ ಈ ಕೃತಿಯ ಮೂಲಕ ಮಾಡಲಾಗಿದೆ. ಚಿತ್ರದುರ್ಗ ಪಾಳೇಗಾರರ ಆಡಳಿತ ಬೇಡರ ಕಟ್ಟೆಮನೆಗಳು, ಅಯ್ಯಣ ಪೇಟೆಯಲ್ಲಿರುವ ಪೇಟೆ ಆಂಜನೇಯ ದೇವಸ್ಥಾನದಲ್ಲಿ ಭರಮಣ್ಣ ನಾಯಕನ ಕಾಲದಲ್ಲಿ ನಡೆದ ವ್ಯಾಜ್ಯ ತೀರ್ಮಾನಗಳು ಇನ್ನೂ ಹೆಚ್ಚಿನ ವಿಚಾರಗಳನ್ನು ಇಲ್ಲಿವೆ. ಚಿತ್ರದುರ್ಗ, ಕೆಳದಿ, ಹಾಗಲವಾಡಿ, ಹಂಡೆ, ಹರಪನಹಳ್ಳಿ, ನಾಯಕನಹಟ್ಟಿ, ತರೀಕೆರೆ, ಮತ್ತೊಡು, ಗುಡಗುಂಟಿ, ಕನಕಗಿರಿ, ಸುಗಟೂರು, ಹಾಲೇರಿ, ಸುರಪುರ, ಆನೇಗೊಂದಿ, ದೇವದುರ್ಗ, ಯಲಹಂಕ ಪ್ರಭುಗಳು, ದೇಸಗತಿ ಮನೆತನಗಳು -- ಹೀಗೆ ಅನೇಕ ಪಾಳೆಯಗಾರರ/ಅರಸು ಮನೆತನಗಳ ನ್ಯಾಯಾಂಗ/ನ್ಯಾಯತೀರ್ಮಾನ ಪದ್ಧತಿ ಕುರಿತು ಅನೇಕ ವಿದ್ವಾಂಸರು ಬರೆದಿರುವ ವಿಶಿಷ್ಟ ಸಂಶೋಧನ ಲೇಖನಗಳನ್ನು ಇಲ್ಲಿ ಕಾಣಬಹುದು.
©2024 Book Brahma Private Limited.