ಪ್ರಾಚೀನ ಕರ್ನಾಟಕದ ಅಧ್ಯಯನಕ್ಕೆ ಹೊಸ ಬಗೆಯ ಆಕರ ಸಾಮಗ್ರಿಯೆಂಬಂತಿರುವ ಈ ಗ್ರಂಥದಲ್ಲಿ ಒಟ್ಟು 134 ಕೈಫಿಯತ್ತುಗಳಿವೆ. 18ನೇ ಶತಮಾನದ ಉತ್ತರಾರ್ಧ ಮತ್ತು 19ನೇ ಶತಮಾನದ ಪೂರ್ವಾರ್ಧದಲ್ಲಿ ಮೆಕೆಂಝಿ ಸಂಗ್ರಹಿಸಿದ ಕೈಫಿಯತ್ತುಗಳೂ ಈ ಸಂಗ್ರಹದಲ್ಲಿವೆ.
ಸಂಪಾದಕರಾದ ಡಾ. ಎಂ.ಎಂ.ಕಲಬುರ್ಗಿಯವರು ಈ ಕೃತಿಗೆ ಬರೆದ ಪ್ರಸ್ತಾವನೆಯಲ್ಲಿ 'ಕೈಫಿಯತ್ತು'ಗಳ ಇತಿಹಾಸ ತೆರೆದಿಟ್ಟಿದ್ದಾರೆ. ಇಲ್ಲಿಯೇ ಒಂದಡೆ (XVII) ಅವರು, ’ಈ ಕೈಫಿಯತ್ತುಗಳನ್ನು ಅಭ್ಯಾಸದ ಅನುಕುಲಕ್ಕಾಗಿ....’ ಮೈಸೂರು ಪ್ರದೇಶದ ಕೈಫಿಯತ್ತುಗಳು (53), ದಕ್ಷಿಣ-ಉತ್ತರ ಕನ್ನಡ ಜಿಲ್ಲೆಗಳ ಕೈಫಿಯತ್ತುಗಳು (54-100), ಬಳ್ಳಾರಿ ಪ್ರದೇಶದ ಕೈಫಿಯತ್ತುಗಳು(101-114), ಇತರ ಕೈಫಿಯತ್ತುಗಳು (115-134)ಎಂದು ಭೌಗೋಳಿಕ ಆಧಾರದ ಮೇಲೆ ವಿಂಗಡಿಸಿದ್ದಾರೆ. ಜೊತೆಗೆ ಬಳಸಿರುವ ಆಕರಗಳ ವಿವರ, ಈ ಕ್ಷೇತ್ರದಲ್ಲಿ ನಡೆದ ಅಧ್ಯಯನಗಳ ಮಾಹಿತಿ, ಕೈಫಿಯತ್ತುಗಳು ಚರಿತ್ರೆಯ ಅಧ್ಯಯನಕ್ಕೆ ಒದಗಿಸುವ ಉಪಯುಕ್ತತೆ ಮುಂತಾದ ಸಂಗತಿಗಳನ್ನು ನೀಡಿದ್ದಾರೆ. ರಾಜಕೀಯ, ಆಡಳಿತ, ಸಾಮಾಜಿಕ ಆಚರಣೆ, ಜಾತಿ, ಧಾರ್ಮಿಕ, ವಾಸ್ತುವಿಶೇಷತೆ, ಪ್ರಾದೇಶಿಕತೆ, ವಾಣಿಜ್ಯ, ಸಾಹಿತ್ಯ, ಬರವಣಿಗೆ-ಭಾಷೆ ಇವೆಲ್ಲವೂ ಸಮಾವಿಷ್ಟಗೊಂಡಿರುವ ಈ ಕೈಫಿಯತ್ತುಗಳ ದಾಖಲೀಕರಣ, ವಿಶೇಷವಾಗಿ ಮಧ್ಯಕಾಲೀನ ಕರ್ನಾಟಕದ ಜನಜೀವನವನ್ನು ಪರಿಚಯಿಸುವ ಬಹುದೊಡ್ಡ ಭಂಡಾರ ಎಂಬುದನ್ನು ಈ ಕೃತಿಯು ಪ್ರಸ್ತುತ ಪಡಿಸುತ್ತದೆ.
©2024 Book Brahma Private Limited.