ಕನ್ನಡದ ಪ್ರಮುಖ ಕತೆಗಾರ, ಹಂಪಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಅಮರೇಶ ನುಗಡೋಣಿಯವರು ಹೊರತಂದಿರುವ ಪುಸ್ತಕ ’ಹೈದರಾಬಾದು ಕರ್ನಾಟಕ - ಹಾಡು ಪಾಡು’.
ಹೈದರಾಬಾದು-ಕರ್ನಾಟಕದ ಭೌಗೋಳಿಕ ವ್ಯಾಪ್ತಿಯನ್ನು ಗಮನದಲ್ಲಿಟ್ಟುಕೊಂಡು, ಭೌಗೋಳಿಕ ಪರಿಸರದ ಸಾಂಸ್ಕೃತಿಕ ಚರಿತ್ರೆಯನ್ನು ಅವಲೋಕಿಸಿರುವ ಬಗ್ಗೆ ಈ ಪುಸ್ತಕದಲ್ಲಿದೆ. ಇತಿಹಾಸವನ್ನು ಗಮನದಲ್ಲಿಟ್ಟುಕೊಂಡು ಮೌರ್ಯರ ಕಾಲದಿಂದ ಹಿಡಿದು ಆಧುನಿಕ ಪ್ರಭುತ್ವದವರೆಗಿನ ಕಾಲಾವಧಿಯಲ್ಲಿ ಪ್ರಭುತ್ವ, ಧರ್ಮ, ಭಾಷೆ, ಸಾಹಿತ್ಯ ಮತ್ತು ಸಮಾಜಗಳ ನಡುವಿನ ಸಂಬಂಧವನ್ನು ಅರಿಯಲು ಪುಸ್ತಕ ಉತ್ತಮ ಆಕರ.
ಹೈದರಾಬಾದು ಕರ್ನಾಟಕದ ಅಧ್ಯಯನ ನಡೆಸಿ ಹೊರತಂದಿರುವ ಕೃತಿ ಚರಿತ್ರೆಯೂ ಹೌದು, ಸಂಸ್ಕೃತಿ ಕಥನವೂ ಹೌದು. ಸ್ವಾತಂತ್ಯ್ರೋತ್ತರ ಕಾಲದ ಸಾಹಿತ್ಯ, ಶಿಕ್ಷಣ ಮತ್ತು ಸಮಾಜ , ವಲಸೆ ಬಂದ ಮಕ್ಕಳ ಶೈಕ್ಷಣಿಕ ಸಮಸ್ಯೆಗಳು , ರೈತರ ಸಮಸ್ಯೆ, ಜಲಸಂಪತ್ತು, ಬಡತನ, ಮತ್ತು ನಿಜಾಮ ಆಳ್ವಿಕೆ , ಅನುಭಾವಿಗಳ - ತತ್ವಪದಕಾರರ ಚಳವಳಿ, ಲಿಪಿಯ ಬಳಕೆ, ಯೋಜನೆ- ನೀತಿಗಳು, ಮತ್ತು ದೇಶಿ ಭಾಷಿಗರ ಬಿಕ್ಕಟ್ಟು, ಸಂಸ್ಥಾನಗಳು -ಬಹುಸಂಖ್ಯಾತ ಕನ್ನಡಿಗರ ಬಗ್ಗೆ ಪ್ರಸ್ತಾಪಿಸುವ ಅನೇಕ ಅಂಶಗಳು ಕೃತಿಯಲ್ಲಿ ದಾಖಲಾಗಿವೆ.
©2024 Book Brahma Private Limited.