ಯಾವುದೇ ವೃತ್ತಿಯ ಅಭಿವೃದ್ದಿಗೆ ಆ ವೃತ್ತಿಪರರಲ್ಲಿ ವೃತ್ತಿಯನ್ನು ಬೆಳೆಸುವ ಬದ್ದತೆ, ಆ ನಿಟ್ಟಿನಲ್ಲಿನ ಕಾರ್ಯಕ್ಷಮತೆ ಮತ್ತು ಸಾಂಘಿಕ ಪ್ರಯತ್ನಗಳು ಪ್ರಮುಖವಾಗುತ್ತವೆ. ಸಮಾಜಕಾರ್ಯ ವೃತ್ತಿಪರತೆ ಹೇಗಿರಬೇಕು ಎಂಬುದರ ಕುರಿತು ಈ ಕೃತಿಯು ವಿಶ್ಲೇಷಿಸಿದೆ. ಈ ಪುಸ್ತಕದಲ್ಲಿ ನಿರೂಪಿಸಲಾಗಿರುವ ವಸ್ತು ವಿಷಯಗಳು ವೈಜ್ಞಾನಿಕ ಸಮಾಜಕಾರ್ಯದ ಎಲ್ಲಾ ರೂಪಗಳನ್ನು ಒಳಗೊಂಡಿದ್ದು, ಸ್ನಾತಕ ಮತ್ತು ಸ್ನಾತಕೋತ್ತರ ಮಟ್ಟದಲ್ಲಿ ಸಮಾಜಕಾರ್ಯವನ್ನು ಅಭ್ಯಸಿಸುತ್ತಿರುವ ವಿದ್ಯಾರ್ಥಿಗಳಿಗೆ, ಅಧ್ಯಾಪಕರುಗಳಿಗೆ ಮತ್ತು ವ್ಯಕ್ತಿಗತ ಸಮಾಜಕಾರ್ಯ ಆಚರಣೆ ಮಾಡುತ್ತಿರುವ ವೃತ್ತಿಪರರಿಗೆ ಪ್ರಮುಖವಾದ ಸಾಧನವಾಗುತ್ತದೆ.
©2024 Book Brahma Private Limited.