ಪಂಡಿತ ಚನ್ನಪ್ಪ ಎರೇಸೀಮೆ ಅವರು ಬರೆದ ಕೃತಿ-ಬಸವಣ್ಣನ ಪಂಚಪರುಷ. 1951ರಲ್ಲಿ ಶ್ರೀ ಗೌರಿಶಂಕರ ಸ್ವಾಮಿಗಳು ತುಮಕೂರಿನ ವೀರಭದ್ರ ದೇವಾಲಯದಲ್ಲಿ ಸಿಂಗಿರಾಜನ ಬಸವ ಪುರಾಣದಲ್ಲಿ ಬರುವ ಒಂದು ಪವಾಡದ ಬಗ್ಗೆ ಉಪನ್ಯಾಸ ನೀಡುತ್ತಿದ್ದು, ಅದು ತುಂಬಾ ಕುತೂಹಲವೆನಿಸಿದ್ದರಿಂದ, ಅದೇ ಜಾಡು ಹಿಡಿದು ತಾವು ‘ಬಸವಣ್ಣನ ಪಂಚಪರುಷ’ ಕೃತಿ ಬರೆದಿದ್ದಾಗಿ ಲೇಖಕರು ಹೇಳಿಕೊಂಡಿದ್ದಾರೆ.
ಬಸವಣ್ಣನವರು ಎಲ್ಲರಂತೆ ಈ ಭೂಮಿಯ ನಡೆದರೂ ಅವರ ಪಾದಕ್ಕೆ ಮಣ್ಣು ಹತ್ತಲಿಲ್ಲ. ಅವರ ನಡೆಯೇ ಸಾಮಾನ್ಯರಂತಿರಲಿಲ್ಲ. ಸಾಮಾನ್ಯರು ಅವರಂತೆ ಜೀವಿಸುವುದು ಕಷ್ಟವಾಗಿತ್ತು. ಶರಣಜೀವಿಗಳು ಮಾತ್ರ ಅಂತಹ ನಡೆಗೆ ಯೋಗ್ಯವಾಗಿದ್ದರು. ಅದಕ್ಕಾಗಿ ಸಾಮಾನ್ಯರು ಬಸವಣ್ಣನವರು ಪವಾಡ ಪುರುಷರು ಎಂಬಂತೆ ಬಿಂಬಿಸಿದರು. ಬಸವಣ್ಣನವರನ್ನು ವಿಶ್ವಾತೀತರೆಂದೂ ಹೊಗಳಬಹುದು. ತಲೆಯ ಮೇಲೆ ಹೊತ್ತು ಕುಣಿಯಬಹುದು. ಆದರೆ, ಅವರ ತತ್ವವನ್ನು ಜೀರ್ಣೀಸಿಕೊಳ್ಳುವುದು ಅಷ್ಟು ಸುಲಭವಲ್ಲ ಎಂಬ ಸಂಗತಿಯನ್ನು ಈ ಕೃತಿಯಲ್ಲಿ ತೋರಿದ್ದಾರೆ.
©2024 Book Brahma Private Limited.