ದೇವು ಪತ್ತಾರ ಅವರ" ಬಹಮನಿ ಸಾಮ್ರಾಜ್ಯ" ಕೃತಿಯು ಕಲಬುರಗಿ-ಬೀದರ್ ರಾಜಧಾನಿಯಾಗಿದ್ದ ಬಹಮನಿ ಸಾಮ್ರಾಜ್ಯದ ಕುರಿತು ಮಾಹಿತಿಯುಳ್ಳದ್ದಾಗಿದೆ. ಗುಲ್ಬರ್ಗಾ, ಬೀದರ ನಗರಗಳನ್ನು ರಾಜಧಾನಿಯಾಗಿಸಿಕೊಂಡು ಆಳಿದ ಬಹಮನಿ ಅರಸರ ಕಾಲದಲ್ಲಿ ಪಾರಸಿ ಬಾಷೆ,ಕಲೆ ಸಂಸ್ಕೃತಿಗಳು ಗಾಢವಾದ ಪ್ರಭಾವವನ್ನು ಕರ್ನಾಟಕದಲ್ಲಿ ಬೀರಿದ್ದವು.ಬಹಮನಿ ಅರಸು ಫಿರೋಜ್ ಖಾನ್ ನು ವಿಜಯನಗರದ ಅರಸು ಪ್ರೌಢರಾಯನ ಮಗಳನ್ನು ಮದುವೆಯಾದ ಸಂಗತಿ ಬಹಮನಿ ಮತ್ತು ಕರ್ನಾಟಕದ ಈಶಾನ್ಯ ಭಾಗದಲ್ಲಿ ಪಾರ್ಸಿ ಮತ್ತು ಭಾರತೀಯ ಸಂಸ್ಕೃತಿಗಳ ಕೊಡು- ಕೊಳೆ ಸಹಜವಾಗಿ ಸ್ಥಾಪಿಸಲ್ಪಟ್ಟಿತು. ಉರ್ದು ಬಾಷೆಯ ಮೊದಲ ಗದ್ಯ ಲೇಖಕ ಸೂಫೀ ಸಂತ ಖ್ವಾಜಾ ಬಂದೇನವಾಜರು ಗುಲ್ಬರ್ಗಾಕ್ಕೆ ಬಂದು ನೆಲೆನಿಂತಿದ್ದರಿಂದ ಅವರ ಅನುಬಾವದ ಸಂಪತ್ತಿನೊಂದಿಗೆ,ರಾಜ್ಯಾಡಳಿತದ ಅಪಾರ ಜ್ಞಾನ ಸಂಪತ್ತೂ ಈಶಾನ್ಯ ಬಾಗದ ಕರ್ನಾಟಕಕ್ಕೆ ಲಭಿಸಿತ್ತು ಎಂಬುದು ಗಮನಾರ್ಹ ಸಂಗತಿ. ಇದಲ್ಲದೇ ಒಂದೆನೇ ಮುಹಮ್ಮದ್,ಒಂದನೇ ದಾವುದ್,ಎರಡನೇ ಮುಹಮ್ಮದ್,ಘಿಯಾಸುದ್ದೀನ್ ತಹಮ್ತನ್, ಶಂಸುದ್ದೀನ್ ಎರಡನೇ ದಾವುದ್,ತಾಜುದ್ದೀನ್ ಫಿರೋಜ್, ಇನ್ನೂ ಅನೇಕ ದೊರೆಗಳ ಹೋರಾಟ, ದಂಗೆ,ಸಾಮ್ರಾಜ್ಯ ಶಾಯಿ,ಪಲಾಯನ ದ ಸಂದರ್ಭಗಳನ್ನು ಈ ಪುಸ್ತಕ ತನ್ನ ಗರ್ಬದಲ್ಲಿ ಹಿಡಿದಿಟ್ಟುಕೊಂಡಿದೆ.
©2024 Book Brahma Private Limited.