ವೀರಶೈವ ಆಚಾರಗಳು ಕುರಿತಂತೆ ‘ವಚನ ಶಾಸ್ತ್ರ ಸಾರ-ಭಾಗ-3' ಕೃತಿಯನ್ನು ಫ.ಗು. ಹಳಕಟ್ಟಿ ಅವರು ರಚಿಸಿದ್ದಾರೆ. ಕೃತಿಯ ಮೊದಲ ಭಾಗದಲ್ಲಿ ಶಿವಶರಣರ ಧಾರ್ಮಿಕ ಹಾಗೂ ಸಾಮಾಜಿಕ ವಿಚಾರಗಳು, 2ನೇ ಭಾಗದಲ್ಲಿ ವೀರಶೈವ ಸಿದ್ಧಾಂತವು ನಿರೂಪಿತವಾಗಿದೆ. ಪ್ರಸ್ತುತ ಕೃತಿಯ ಮೂರನೇ ಭಾಗದಲ್ಲಿ ವೀರಶೈವ ಆಚಾರಗಳು ಪ್ರಮುಖವಾಗಿ ವಿವರಿಸಲಾಗಿದೆ. ಇಲ್ಲಿಯೂ ನಾಲ್ಕು ವಿಭಾಗಗಳನ್ನು ಮಾಡಿದ್ದು, ಕ್ರಿಯೆ (ಪುಣ್ಯ-ಪಾಪ, ಸ್ವರ್ಗ-ನರಕ, ಅಂಗ-ಲಿಂಗ..ಗುರು-ಲಿಂಗ-ಜಂಗಮ, ಕಾಯಕ, ದಾಸೋಹ ಹೀಗೆ..), ಆಚಾರ ಭೇದಗಳು (32 ಕಲೆಗಳು, ಸರ್ವಾಚಾರ ಸಂಪತ್ತು, ಷಟಸ್ಥಲ ಆಚರಣೆಗಳು, ಪಂಚಾಚಾರ, ಸಪ್ತಾಚಾರಗಳು.....) ಅಷ್ಟಾವರಣಗಳು (ಅಂತರಂಗದ ಅಷ್ಟಾವರಣಗಳು, ಸ್ಥೂಲ ಶರೀರ, ಸೂಕ್ಷ್ಮ ಶರೀರ, ಕಾರಣ ಶರೀರ....) ಹಾಗೂ ಕೊನೆಯದಾಗಿ ಗುರು (ಕ್ರಿಯಾ ದೀಕ್ಷೆ, ಲಿಂಗದೀಕ್ಷೆ, ಮಂತ್ರದೀಕ್ಷೆ...ಜಂಗಮ, ಶಿವಯೋಗ...) ಇಂತಹ ಪರಿಕಲ್ಪನೆಗಳನ್ನು ಅನುಭಾವ ನೆಲೆಯಲ್ಲಿ ವಿವರಿಸಲಾಗಿದೆ.
ಹೊಸತು-2004- ಆಗಸ್ಟ್
ತೋಂಟದಾರ್ಯ ಸಂಸ್ಥಾನ ಮಠ, ಡಂಬಳ - ಗದಗ ವೀರಶೈವ ವಚನಸಾಹಿತ್ಯದಲ್ಲಿ ಹುದುಗಿರುವ ಶಿವತತ್ವ ಚಿಂತನೆಯನ್ನು ಕ್ರೋಢೀಕರಿಸಿ ಸಂಗ್ರಹಿಸಲಾಗಿದೆ. ಶಿವತತ್ವದ ಪರಿಚಯದೊಂದಿಗೆ ಪ್ರಾರಂಭವಾದ ಮೊದಲೆರಡು ಸಂಪುಟಗಳ ಮುಂದುವರಿಕೆಯಾಗಿ ಇದೀಗ ಮೂರನೆಯ ಸಂಪುಟ ಪರಿಷ್ಕರಣಗೊಂಡು ಬಂದಿರುತ್ತದೆ. ಈ ಸಂಪುಟ ಮುಖ್ಯವಾಗಿ ನಾಲ್ಕು ಭಾಗಗಳನ್ನು ಹೊಂದಿದ್ದು ಅಷ್ಟಾವರಣಗಳು, ಆಚಾರ ಭೇದಗಳು, ಕ್ರಿಯೆ ಮತ್ತು ಶಿವಯೋಗದಂತಹ ಮಹತ್ವದ ವಿಷಯಗಳನ್ನು ಹೊಂದಿದೆ. ಎಲ್ಲವೂ ಶಿವಸಾಕ್ಷಾತ್ಕಾರ ಮುಕ್ತಿ ಮಾರ್ಗದ ಕಡೆ ನಡೆವ, ಅಧ್ಯಾತ್ಮಿಕ ಗುರಿಯನ್ನು ಸೇರುವ ಈಶ್ವರ ಸಂಬಂಧೀ ವಿಷಯಗಳು ಹೇರಳವಾಗಿವೆ. ಗ್ರಂಥವನ್ನು ಸಿದ್ಧಪಡಿಸಲು ಭಾರಿ ಸಂಖ್ಯೆಯ ವಚನಕಾರರ ವಚನಗಳನ್ನು ಆಧಾರವಾಗಿ ಬಳಸಿಕೊಳ್ಳಲಾಗಿದೆ.
©2024 Book Brahma Private Limited.