‘ವಚನಗಳ ಶುದ್ಧೀಕರಣ’ ಕೃತಿಯು ಎಸ್. ಆರ್. ಗುಂಜಾಳ ಅವರ ಲೇಖನ ಸಂಕಲನವಾಗಿದೆ. ಈ ಕೃತಿಯ ಬೆನ್ನುಡಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ; ವಚನಗಳು ಬಸವಾದಿ ಶಿವಶರಣರ ಒಂದು ಸಮೂಹ ಸೃಷ್ಟಿ. ಸಮಾಜೋಧಾರ್ಮಿಕ ಬದಲಾವಣೆಯ ಕ್ರಾಂತಿಗಾಗಿ ಹುಟ್ಟಿಕೊಂಡ ಈ ಸಾಹಿತ್ಯ ಪುರೋಹಿತಶಾಹಿ ವರ್ಗದ ಕೆಂಗಣ್ಣಿಗೆ ಗುರಿಯಾಗಿ ಅಪಾರ ಪ್ರಮಾಣದಲ್ಲಿ ಹಾಳಾಯಿತು. ಅಳಿದುಳಿದ ಹಸ್ತಪ್ರತಿಗಳು ಭಾವುಕ ಭಕ್ತರ ಜಗುಲೆ ಏರಿ ಪೂಜೆಯ ನೆಪದಲ್ಲಿ ಹಾಳಾದವು. ಇಷ್ಟೆಲ್ಲ ನಾಶವಾಗಿಯೂ ಉಳಿದ ವಚನ ಸಾಹಿತ್ಯವನ್ನು ಮೊದಲ ಬಾರಿಗೆ ಸಂಗ್ರಹಿಸಿ ಪ್ರಕಟಿಸಿದವರು ಡಾ. ಫ.ಗು. ಹಳಕಟ್ಟಿಯವರು. ನಂತರ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಡಾ. ಆರ್.ಸಿ. ಹಿರೇಮಠ ಅವರು ಅದಕ್ಕೊಂದು ಅಕಾಡೆಮಿಕ ಶಿಸ್ತನ್ನು ತಂದುಕೊಟ್ಟರು. ಆದರೆ ಪ್ರಕಟಿತ ವಚನಗಳಲ್ಲಿಯೂ ಅನೇಕ ದೋಷಗಳು ಉಳಿದುಕೊಂಡಿರುವುದು ಮತ್ತು ಅವು ಅಪಾರ್ಥಕ್ಕೆಡೆ ಮಾಡಿಕೊಟ್ಟಿರುವುದು ಕಂಡು ಬರುತ್ತದೆ. ಇಂಥ ಕೆಲವು ವಿಚಾರಗಳನ್ನು ಡಾ.ಎಸ್.ಆರ್. ಗುಂಜಾಳ ಅವರು ಪ್ರಸ್ತುತ ಕೃತಿಯಲ್ಲಿ ತೋರಿಸಿಕೊಟ್ಟಿದ್ದಾರೆ. ಡಾ. ಗುಂಜಾಳ ಅವರ ಆಳವಾದ ಅಧ್ಯಯನದಿಂದ ರೂಪುಗೊಂಡ ಈ ಕೃತಿ ವಚನಗಳ ಶುದ್ಧೀಕರಣಕ್ಕೆ ದಾರಿದೀಪವಾಗಿದೆ ಎಂದಿದೆ.
©2024 Book Brahma Private Limited.