‘ವಚನ ವಾಣಿ’- ಆಧುನಿಕ ಕನ್ನಡ ವಚನಗಳಿರುವ ಈ ಕೃತಿಯು ಟಿ. ಪಿ ಉಮೇಶ್ ಅವರ ವಚನ ಸಂಕಲನವಾಗಿದೆ. ಕೃತಿಯ ಬೆನ್ನುಡಿಯಲ್ಲಿ ಕೆಲವೊಂದು ಕವನಗಳು ಹೀಗೆ ಬಿತ್ತರಿಸಿಕೊಂಡಿದೆ:
ಕಲ್ಲು ಚೂರಾಗಿ ಉದುರಿ ಮಣ್ಣಾಗುವುದು; ಕಬ್ಬಿಣವು ತುಕ್ಕು ಹಿಡಿದು ಹುಡಿಯಾಗುವುದು ಮೋಡವು ತಣಿದು ಕರಗಿ ನೀರಾಗಿ ಹರಿಯುವುದು, ಗಿಡಮರಗಳು ಒಣಗಿ ಮಣ್ಣಿಡಿಯುವವು ಸೂರ್ಯ ಚಂದ್ರರು ಗ್ರಹಣದಿ ನರಳುವವರು ಉಮೇಶಪ್ಪಿಯು ಶಿವಮೂರ್ತಿ ಪ್ರಭುವೆ ಮಾನವನೇನು ಶಾಶ್ವತದ ಮತ್ಥಳಿಯೇನು? ಇಲ್ಗುಳಿದು ಉರಿದು ಹೊಳೆದು ಮರೆಯಲು?
ಮರಗಳಿಗೆ ಕೋಟಿ ಕೋಟಿ ಕೊಡುವ ಸರ್ಕಾರ ಆಸ್ತಿ ಉಂಬಳಿ ಬಿಟ್ಟುಕೊಡುವ ಸರ್ಕಾರ ಯಾವ ಕಾನೂನು ಕಾಯ್ದೆಗಳ ನೋಡಲಿಲ್ಗ! ಯಾವ ಅಂಕೆ ಶಂಕೆಗಳನು ತೋರಲಿಲ್ಗ! ನೆರೆ ಬಂದ ಬಡವರಿಗೆ ಸೂರೊಂದ ಕೊಡಲಿಕ್ಕೆ ನೂರೆಂಟು ದಾಖಲೆಗಳ ಕೇಳುವುದೀ ಸರ್ಕಾರ! ಬೆಳೆ ಬರೆದ ರೈತರಿಗೆ ಪರಿಹಾರ ಕೊಡಲಿಕ್ಕೆ ನೂರೆಂಟು ಷರತ್ತುಗಳ ಗೀಚುವುದೇ ಸರ್ಕಾರ! ಉಳ್ಳವರಿಗೇ ಮತ್ತೆ ಊರುಗೋಲಾಗುವ ಸರ್ಕಾರವ ಉಮೇಶಪ್ಪಿಯ ಶಿವಮೂರ್ತಿ ಪ್ರಭುವೆ ಇಲ್ಲದವರಿಗೊಂದಿಷ್ಟು ಊರುಗೋಲಾದರು ಆಗಿಸಯ್ಯಾ !
©2024 Book Brahma Private Limited.