ಕೆ.ಸಿ. ಶಿವಪ್ಪ
(26 July 1937)
ಕೆ.ಸಿ.ಶಿವಪ್ಪ-ಚಾಮರಾಜನಗರ ಜಿಲ್ಲೆಯ ಕಾಗಲವಾಡಿಯಲ್ಲಿ26-07-1937 ರಲ್ಲಿ ಜನಿಸಿದ ಇವರು ಚಾಮರಾಜನಗರ, ಮೈಸೂರಿನಲ್ಲಿ ವಿದ್ಯಾಭ್ಯಾಸ ಮುಗಿಸಿ, ಸರ್ಕಾರಿ ತರಬೇತಿ ಮಹಾವಿದ್ಯಾಲಯ(ಮೈಸೂರು), ಕೇಂದ್ರ ಚರ್ಮಸಂಶೋಧನಾಲಯ (ಚೆನ್ನೈ), ಬೆಂಗಳೂರು ವಿಶ್ವವಿದ್ಯಾಲಯ, ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ, ಸಚಿವಾಲಯ (ವಿಧಾನಸೌಧ), ಜೆ.ಎಸ್.ಎಸ್ ಮಹಾವಿದ್ಯಾಪೀಠ ಮುಂತಾದೆಡೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ರಾಗರತಿ, ಅನುರಾಗ, ರಾಧಾಮಾಧವ, ಚಿತ್ತಭಿತ್ತಿ, ಚಿತ್ರಾಂಬರ, ಚೆಂಬೆಳಕು, ಚಿದಾನಂದ, ಚೆಲುವೆ,ಚಂದ್ರಿಕೆ, ಚಾರುಲತೆ, ಚಿತ್ರಪತ್ರ(ಕವನ ಸಂಕಲನಗಳು). ಮುದ್ದು ರಾಮನ ಮನಸು, ಮುದ್ದುರಾಮನ ಬದುಕು-ಬೆಳಕು(ಚೌಪದಿಗಳ ಸಂಕಲನ). ಬದುಕಿಗೊಂದು ಭರವಸೆ, ಚಿತ್ತಚಿತ್ತಾರ(ವ್ಯಕ್ತಿ ವಿಕಸನ). ಮೌನಸ್ಪಂದನ, ಚಿತ್ತಪರಿಪಾಕ(ಚಿಂತನ ಬಿಡಿನುಡಿಸಂಚಯ). ಜೀವಸತ್ವಗಳು, ಬೆಡಗಿನ ಬಾಟಿಕ್, ಭೂಮಿ, ಶುಕ್ರದೆಸೆ(ಅನುವಾದ), ಅರವಿಂದ ದರ್ಶನ, ...
READ MORE