‘ವಚನಸಿರಿ’ ಕೃತಿಯು ಎಚ್.ಆರ್. ಲೀಲಾವತಿ ಅವರ ಸಂಕಲನವಾಗಿದೆ. ಈ ಕೃತಿಯಲ್ಲಿ 500ಕ್ಕೂ ಅಧಿಕ ಚಿಕ್ಕ ಚಿಕ್ಕ ವಚನಗಳಿವೆ. ವಿವಿಧ ವಿಚಾರಗಳ ಕುರಿತ ಈ ವಚನ ಕೃತಿಯು ಧರ್ಮಸ್ಥಳದ ಮಂಜುನಾಥ ಸ್ವಾಮಿಯ ಸ್ಮರಣೆಯೊಂದಿಗೆ ಅಂತ್ಯವಾಗುತ್ತದೆ. ಬದುಕಿನ ಒಲವು, ಗೆಲುವು, ನೋವು ನಲಿವುಗಳನ್ನು ಶಬ್ಧಗಳಲ್ಲಿ ಸೆರೆಹಿಡಿದಿದ್ದಾರೆ. ಬಳಸಿದ ಭಾಷೆ ಒಂದು ರೀತಿಯ ಆಹ್ಲಾದಕರವಾದ ಓದಿನ ಅನುಭವವನ್ನು ನೀಡುತ್ತದೆ. ಬದುಕಿನಲ್ಲಿ ಅಳವಡಿಸಿಕೊಳ್ಳಬೇಕಾದ ಬಹಳಷ್ಟು ಸಾಲುಗಳನ್ನು ಇಲ್ಲಿ ಕಾಣಬಹುದು.
©2024 Book Brahma Private Limited.