ಶರಣ ಸಂತುಷ್ಟಿ

Author : ಕಲ್ಯಾಣರಾವ ಜಿ. ಪಾಟೀಲ

Pages 216

₹ 150.00




Year of Publication: 2017
Published by: ರಚನಾ ಪಬ್ಲಿಷಿಂಗ್ ಸೊಸೈಟಿ
Address: ಕಲಬುರಗಿ

Synopsys

‘ಶರಣ ಸಂತುಷ್ಟಿ’ ವೈವಿಧ್ಯಮಯ ವಸ್ತು ವಿಷಯವನ್ನೊಳಗೊಂಡ 9 ಲೇಖನಗಳ ಸಂಪುಟ. ಬುದ್ಧ ಮತ್ತು ಬಸವರ ಬೆಳಕು’ ಈ ಕೃತಿಯ ಮೊದಲ ಲೇಖನ. ಭಾರತೀಯ ಪರಂಪರೆಯಲ್ಲಿ ವೈಚಾರಿಕ ಶಿಸ್ತು, ವಾಸ್ತವ ಪ್ರಜ್ಞೆ, ಸ್ವಾತಂತ್ರ್ಯ ಅಭಿವ್ಯಕ್ತಿಗೆ ಆದ್ಯತೆ ನೀಡಿದ ಮಹಾನ್ ಪುರುಷರು. ಕಾಲ, ಸ್ಥಳ, ಪರಿಸರಗಳ ಚಾರಿತ್ರಿಕ ದೃಷ್ಟಿಯಿಂದ ಬುದ್ಧ ಮತ್ತು ಬಸವಾದಿ ಶಿವಶರಣರ ವಿಚಾರಗಳಿಗೆ ಎತ್ತಣಿಂದೆತ್ತಣ ಸಂಬಂಧ ಎನಿಸಿಬಹುದು. ಆದರೆ ಮನುಷ್ಯನ ಜೀವನ ವಿಕಾಸಕ್ಕೆ ಎಲ್ಲಂದರಲ್ಲಿ ಶ್ರಮಿಸಿದ ಈ ಚೇತನಗಳ ಅಂತರಾತ್ಮಕ್ಕೆ ನಾವೆಲ್ಲ ಮಣಿಯಲೇಬೇಕಾಗುತ್ತದೆ. ಅವರ ಮಾನಸಿಕ ತಾಕಲಾಟ, ಆಂತರಿಕ ತುಡಿತಗಳಿಗೆ ಪ್ರತಿಸ್ಪಂದಿಸಲೇ ಬೇಕಾಗುತ್ತದೆ” ಎಂಬ ಲೇಖಕರ ಮಾತು ಮನನೀಯ. ಬುದ್ಧ ಬಸವರ ವೈಚಾರಿಕ ಮನೋಭೂಮಿಕೆಯನ್ನು ಪಂಚಶೀಲ ಮತ್ತು ಪಂಚಾಚಾರ, ಅಷ್ಟಾಂಗ ಮಾರ್ಗ ಮತ್ತು ಷಟ್‍ಸ್ಥಲ ಸಿದ್ಧಾಂತಗಳ ಹಿನ್ನೆಲೆಯಲ್ಲಿ ತೌಲನಿಕವಾಗಿ ವಿವೇಚಿಸಿದ್ದಾರೆ.

ಡೋಹರ ಕಕ್ಕಯ್ಯನವರ ಕುರಿತಾದ ಲೇಖನವಿದೆ. ಡೋಹರ ಎಂದರೆ ಜಾತಿವಾಚಕ ವೃತ್ತಿ ವಾಚಕಪದವಾಗಿ ಗ್ರಹಿಸುತ್ತೇವೆ. ಆದರೆ ಇಲ್ಲಿ ಲೇಖಕರು ಡೋಹರ ಎಂದರೆ ಜೀವರಕ್ಷಕ, ಅಸಹಾಯಕರ ಪ್ರಾಣ ಸಂರಕ್ಷಕ, ಉತ್ಸಾಹಿ ವೀರಯೋಧ ಎಂಬರ್ಥದ ಹಿನ್ನೆಲೆಯಲ್ಲಿ ಕಕ್ಕಯ್ಯನ ಜೀವನ ವೃತ್ತಾಂತ, ವಚನ ವಿಶ್ಲೇಷಣೆಯನ್ನು ತಾದಾತ್ಮ್ಯದಿಂದ ಪರಿಶೀಲಿಸಿದ್ದಾರೆ. ಶಾಸನ, ಜನಪದ, ಶಿಷ್ಟ ಸಾಹಿತ್ಯ ಮತ್ತು ಸಮಕಾಲೀನ ವಚನ ಸಾಹಿತ್ಯದಲ್ಲಿ ಉಕ್ತಗೊಂಡ ಕಕ್ಕಯ್ಯನ ಮಹೋನ್ನತ ವ್ಯಕ್ತಿತ್ವವನ್ನು ಕಂಡರಿಸಿದ್ದಾರೆ. ‘ಸ್ವರ್ಗ-ನರಕ ಕುರಿತಾದ ಶಿವಶರಣರ ಪರಿಕಲ್ಪನೆ’ಯನ್ನು ವೈಚಾರಿಕ ನೆಲೆಯಲ್ಲಿ ಆಲೋಚಿಸಿದ್ದನ್ನು ಗುರುತಿಸಬಹುದು. ತನು ಸಂಬಂಧಿ ಸ್ವರ್ಗ-ನರಕ, ಮನ ಸಂಬಂಧಿ ಸ್ವರ್ಗ-ನರಕ, ಅರಿವು ಮತ್ತು ಅನುಸರಣೆಯ ಸ್ವರ್ಗ-ನರಕ, ಸೃಷ್ಟಿ, ವ್ಯಷ್ಟಿ ಮತ್ತು ಸಮಷ್ಟಿ ಪ್ರಜ್ಞೆಯ ಸ್ವರ್ಗ-ನರಕ ಕುರಿತು ವಚನಕಾರರ ವಿಚಾರಗಳನ್ನುಸಮಾಲೋಚಿಸಿದ್ದಾರೆ. ‘ವಚನಗಳಲ್ಲಿ ವ್ಯಕ್ತವಾದ ವ್ಯಕ್ತಿತ್ವ ವಿಕಾಸ’ದ ಆಯಾಮಗಳನ್ನು ಕಟ್ಟಿಕೊಡುವಾಗ ನಿರಂತರ ಪರಿಶ್ರಮ, ಕ್ರಿಯಾಶೀಲತೆ, ವಿನಮ್ರತೆ, ಪಾರದರ್ಶಕತೆ, ಭಾವೈಕ್ಯತೆ, ಸಾಮರಸ್ಯತೆ, ಪ್ರಬುದ್ಧ ವಿವೇಚನೆ, ವಿಶ್ವಾಸರ್ಹತೆಯ ಮಾನದಂಡದಿಂದ ಪರಿಶೀಲಿಸಿದ್ದಾರೆ. ನದಿಯೊಳಗೆ ನದಿ ಬೆರೆಯುವಂತೆ ಜನಮಾನಸವು ಎಲ್ಲಂದರಲ್ಲಿ ಹೊಕ್ಕು ಬಳಕೆಯಿಂದ, ಸಮಾನತೆಯಿಂದ, ಸಾಮರಸ್ಯದಿಂದ, ಸಂತೃಪ್ತಿಯಿಂದ ಜೀವನ ಸಾಗಿಸಬೇಕೆಂಬುದೇ ವಚನಕಾರರ ಮುಖ್ಯ ಆಶಯವನ್ನು ಗುರುತಿಸಿದ್ದಾರೆ.

ಕ್ರಿ.ಶ. 1775ರಲ್ಲಿ ಜನಿಸಿ 1855ರ ಸುಮಾರಿಗೆ ಲಿಂಗೈಕ್ಯರಾದ “ಐನೂಲಿ ಕರಿಬಸವಾರ್ಯರು ಕಲಬುರ್ಗಿ ಜಿಲ್ಲೆಯ ಆದ್ಯ ಶಿವಾನುಭಾವಿ ಆಗಿದ್ದಂತೆ ಪ್ರತಿಭಾವಂತ ಕವಿ, ಸ್ವರವಚನಕಾರ, ಟೀಕಾಕಾರ, ಸಂಕೀರ್ಣ ನೆಲೆಯ ಅಷ್ಟಕ, ಯಕ್ಷಗಾನ, ಗೀತರೂಪಕ, ಸ್ತೋತ್ರಗಳನ್ನು ರಚಿಸಿದ ಸಂತಸಾಹಿತಿ” ಆಗಿದ್ದನ್ನು ಲೇಖಕರು ಸಾಬೀತುಪಡಿಸಿದ್ದಾರೆ. “ಕನ್ನಡ ಸಾಹಿತ್ಯ ಸಂಸ್ಕøತಿಯ ಏಳ್ಗೆಯ ವಿಷಯದಲ್ಲಿ ವಿಶ್ವ ಕಲ್ಯಾಣ ಬಯಸಿದ ಶಿವಾನುಭಾವಿಗಳಿಗೆ ಮಹತ್ವದ ಸ್ಥಾನವಿದೆ. ಸರಳ ಜೀವನ ವಿಧಾನದ ಮೂಲಕ ಸಾರ್ವಕಾಲಿಕ ಜೀವನ ಮೌಲ್ಯಗಳಿಗಾಗಿ ಮಿಡಿಯುತ್ತ ವಿಶ್ವಕಲ್ಯಾಣಕ್ಕಾಗಿ ತನು ಮನ ಧನವನ್ನೆಲ್ಲ ಸವೆಸಿದ ಅವರ ಜೀವನ ಪಥವು ಕಲ್ಯಾಣ ಪರಂಪರೆಗೆ ಕಾರಣ” ಆಗಿದ್ದನ್ನು ಪರಿಶೀಲಿಸಿದ್ದಾರೆ. 12ನೆಯ ಶತಮಾನದಿಂದ 19ನೆಯ ಶತಮಾನದವರೆಗಿನ ಸಂವೇದನಶೀಲ ಕವಿ ಮನಸ್ಸುಗಳನ್ನೆಲ್ಲ ಗುರುತಿಸಿ ಸಮಯಕಲ್ಯಾಣ, ವಿಜಯಕಲ್ಯಾಣ, ಅಮರ ಕಲ್ಯಾಣ, ಧರ್ಮಕಲ್ಯಾಣ, ವಿಶ್ವಕಲ್ಯಾಣವೆಂದು ವಿಭಾಗಿಸಿ ಅಧ್ಯಯನ ಮಾಡಿದ್ದೆನ್ನಿಲ್ಲಿ ‘ವಿಶ್ವಕಲ್ಯಾಣ ಪರಂಪರೆಯ ಶಿವಾನುಭಾವಿಗಳು’ ಲೇಖನದಲ್ಲಿ ಗುರುತಿಸಬಹುದು.

ಡಾ. ಜಯದೇವಿತಾಯಿ ಲಿಗಾಡೆಯವರ ಜೀವನ ಸಾಧನೆ, ಸಾಹಿತ್ಯಿಕ ಕೊಡುಗೆ ಸಮಾಜಕ್ಕೆ ಮಾದರಿ. ಮಹಿಳಾ ಸಬಲೀಕರಣ, ಶೈಕ್ಷಣಿಕ ಜಾಗೃತಿ, ಆರೋಗ್ಯ ಸೇವೆ, ರಜಾಕಾರ ಹಾವಳಿಯಲ್ಲಿ ನಿರಾಶ್ರಿತರಾದವರಿಗೆ ಆಶ್ರಯ, ಕರ್ನಾಟಕ ಏಕೀಕರಣಕ್ಕಾಗಿ ಹಗಲಿರುಳು ದುಡಿದಿರುವ ಸೇವಾಕಾರ್ಯವು ಅನುಪಮವಾದದ್ದನ್ನು ದಾಖಲಿಸಿದ್ದಾರೆ. ವಿಶ್ವಗುರು ಬಸವಣ್ಣನವರ ಕುರಿತು ಹಲವರು ಮಹಾಕಾವ್ಯ ರಚಿಸಿದ್ದು, ಆ ಪರಂಪರೆ ಹರಿಹರ, ಭೀಮಕವಿ, ರಾಜಶೇಖರ ಮೊದಲಾದವರಿಂದ ಪ್ರಾರಂಭಗೊಂಡು ಇವತ್ತಿನವರೆಗೂ ಮುಂದುವರೆದಿದೆ. ಇತ್ತೀಚಿನ ಬರಹಗಾರರಲ್ಲಿ ಗದುಗಿನ ಶ್ರೀ ಬಸವೇಶ್ವರ ತುಪ್ಪದ ರಚಿಸಿರುವ ‘ಶ್ರೀ ಬಸವದರ್ಶನಂ’ ಒಂದಾಗಿದೆ. ಈ ಮಹಾಕಾವ್ಯ ಕುರಿತಂತೆ ಕಲ್ಯಾಣರಾವ ಪಾಟೀಲರು ಡಾ. ಎಂ.ಎಸ್. ಲಠ್ಠೆಯವರ ಮಾರ್ಗದರ್ಶನದಲ್ಲಿ ಎಂ.ಫಿಲ್. ಪದವಿಗಾಗಿ ಸಂಶೋಧನೆ ಮಾಡಿದ್ದು, ಅದನ್ನಿಲ್ಲಿ ಪರಿಷ್ಕರಿಸಿ ಸಂಕ್ಷಿಪ್ತೀಕರಿಸಿ ನೀಡಿದ್ದಾರೆ.

ಶಿವಭಕ್ತ ಕವಿ ಶ್ರೀ ಬಸವೇಶ್ವರ ತುಪ್ಪದ ಅವರ ‘ಶ್ರೀ ಬಸವದರ್ಶನಂ’ ಎಂಬ ದಾರ್ಶನಿಕ ಕಾವ್ಯವು ಬಸವಣ್ಣನವರ ಸೂಜಿಗಲ್ಲಿನ ಆಕರ್ಷಕ ವ್ಯಕ್ತಿತ್ವ ಸಾಧನೆಯ ಮೈಲುಗಲ್ಲುಗಳನ್ನು ದಾಖಲಿಸುತ್ತದೆ. ಸೂಕ್ಷ್ಮದೃಷ್ಟಿಯಿಂದ ಕವಿಯು ಬಸವದರ್ಶನಕ್ಕೆ ಪೂರಕವಾಗುವಂತಹ ಸನ್ನಿವೇಶನಗಳನ್ನು, ಸಹೃದಯರನ್ನು ಅಹ್ಲಾದಗೊಳಿಸುವ ಕಾವ್ಯ ಸೌಂದರ್ಯವನ್ನು, ರಸಾಸ್ವಾದಕ್ಕೆ ಅಗತ್ಯ ಸನ್ನಿವೇಶಗಳನ್ನು, ನಾಟಕೀಯ ಶೈಲಿಯ ಚಿತ್ತಾಕರ್ಷಕ ಸಂಭಾಷಣೆಗಳನ್ನು ಹೆಣೆದಿರುವ ಪರಿವನ್ನು ಲೇಖಕರು ಗುರುತಿಸಿದ್ದಾರೆ. ಕೃತಿಯ ಶೀರ್ಷಿಕೆ ಹೊಂದಿರುವ ‘ಶರಣ ಸಂತಷ್ಟಿ’ಯ ಕೇಂದ್ರ ಶಕ್ತಿ ಡಾ. ಎಂ.ಎಸ್. ಲಠ್ಠೆಯವರು. ಜ್ಞಾನ ಮತ್ತು ಕ್ರಿಯೆಗಳ ಸಮನ್ವಯ ಸಿದ್ಧಾಂತದಂತೆ ಬದುಕಿದ್ದರು. ಅವರ ಸರ್ವೇಂದ್ರಿಯಗಳು ಜನಪದ ಶರಣ ಸಾಹಿತ್ಯ ಚಿಂತನೆಗೆ ಮೀಸಲಾಗಿದ್ದವು ಎನ್ನುವುದನ್ನು ಲೇಖಕರು ಗುರುತಿಸಿದ್ದಾರೆ. ಶರಣ ಸಂತುಷ್ಟಿ ಕೃತಿಗೆ ಗುಲಬರ್ಗಾ ವಿಶ್ವವಿದ್ಯಾಲಯದ ಪ್ರಸಾರಾಂಗದಿಂದ 2018ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಬಂದಿದೆ.

About the Author

ಕಲ್ಯಾಣರಾವ ಜಿ. ಪಾಟೀಲ

ಲೇಖಕ ಡಾ. ಕಲ್ಯಾಣರಾವ ಜಿ. ಪಾಟೀಲ ಅವರು ಮೂಲತಃ ಕಲಬುರಗಿ ಜಿಲ್ಲೆಯ ಕಮಲಾಪುರ ತಾಲ್ಲೂಕಿನ ಸೊಂತ ಸಮೀಪದ ಸರಪೋಷ್ ಕಿಣಗಿ ಗ್ರಾಮದವರು. ತಂದೆ- ಗುರುಪಾದಪ್ಪ ಮಾಲಿಪಾಟೀಲ, ತಾಯಿ- ಮಹಾದೇವಿಯಮ್ಮ. ಪ್ರಾಥಮಿಕ ಶಿಕ್ಷಣವನ್ನು ಹುಟ್ಟೂರಿನಲ್ಲಿ  ಹಾಗೂ ಹಿರಿಯ ಮಾಧ್ಯಮಿಕ ಶಿಕ್ಷಣವನ್ನು ಪಕ್ಕದೂರಾದ ಚೇಂಗಟಾದಲ್ಲಿ ಪೂರ್ಣಗೊಳಿಸಿದರು. ಪ್ರೌಢಶಾಲೆಯಿಂದ ಪದವಿಯವರೆಗೂ ಕಲಬುರಗಿಯ ಶ್ರೀ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದಲ್ಲಿ ನಂತರ  ಶರಣಬಸವೇಶ್ವರ ಕಲಾ ಮಹಾವಿದ್ಯಾಲಯದಿಂದ ಕಾಲೇಜಿಗೆ ಪ್ರಥಮ ಮತ್ತು ಗುಲಬರ್ಗಾ ವಿಶ್ವವಿದ್ಯಾಲಯಕ್ಕೆ ಹತ್ತನೇ ರ್‍ಯಾಂಕಿನೊಂದಿಗೆ ಬಿ.ಎ. ಪದವಿ ಪಡೆದರು. ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಎರಡನೆಯ ರ್‍ಯಾಂಕಿನೊಂದಿಗೆ ಎಂ.ಎ ಪದವಿ ಹಾಗೂ ಮೂರನೇ ರ್‍ಯಾಂಕಿನೊಂದಿಗೆ ಎಂ.ಫಿಲ್ ಪದವಿ  ಹಾಗೂ ಡಾ. ಎಂ.ಎಂ. ...

READ MORE

Related Books