ಲೇಖಕಿ ಡಿ. ನಾಗರತ್ನ ಅವರ ಕೃತಿ-ಶರಣ ಸಂಸ್ಕೃತಿ. 12ನೇ ಶತಮಾನದ ಶರಣರ ಜೀವನ ಸಂಸ್ಕೃತಿ-ಆಚಾರ -ವಿಚಾರಗಳನ್ನು ಕಟ್ಟಿಕೊಡುವ ಕೃತಿ. ಡಾ. ಕೆ. ರವೀಂದ್ರನಾಥ ಅವರು ಕೃತಿಗೆ ಬರೆದ ಮುನ್ನುಡಿಯಲ್ಲಿ ‘ಈ ಸಂಶೋಧನಾ ಸಂಕಲನದ ವಿಶೇಷವೆಂದರೆ, ವಚನಗಳನ್ನು ಸಾಮಾಜಿಕ, ಮತ್ತು ಧಾರ್ಮಿಕ ಆವರಣದಲ್ಲಿಟ್ಟು, ತಾತ್ವಿಕತೆಯನ್ನು ಕುರಿತು ಚರ್ಚಿಸಿರುವುದು. ಶರಣರದ್ದು ಷಟಸ್ಥಲ ಮಾರ್ಗ. ತ್ರಿವಿಧ ದಾಸೋಹವೇ ಇದಕ್ಕೆ ರಹದಾರಿ. ಸ್ಥಾವರಕ್ಕೆ ಅಳಿವುಂಟು ಜಂಗಮಕ್ಕಳಿವಿಲ್ಲ ಎಂಬ ಶರಣ ಸಿದ್ಧಾಂತದಲ್ಲಿ ಜಂಗಮ ಪರಿಕಲ್ಪನೆ ವಿಶೇಷವಾಗಿದೆ. ಅದೇ ರೀತಿ, ಕಾಯಕ ಮತ್ತು ದಾಸೋಹ ತತ್ವಗಳು ಹೊಟ್ಟೆಪಾಡಿಗೆ ಮಾಡುವ ಕಾಯಕಗಳಲ್ಲ. ಅವುಗಳ ಮೂಲಕ ಸಾಮಾಜೀಕರಣಗೊಳ್ಳಬೇಕು ಎಂಬ ಸಿದ್ಧಾಂತವಿದೆ. ವಚನಗಳ ಮೂಲಕ ಇಲ್ಲಿಯ ಲೇಖನಗಳು ದಾಂಪತ್ಯ, ಬದುಕು, ಸಮಾಜ, ಸಾಹಿತ್ಯ, ಧರ್ಮ ತಾತ್ವಿಕತೆಯನ್ನು ನಿರೂಪಿಸುತ್ತವೆ. ವಚನಕಾರರು ಕಟ್ಟಬಯಸಿದ ವರ್ಗ-ವರ್ಣರಹಿತ ಸಮಾಜದ ಪರಿಕಲ್ಪನೆಯ ಆಶಯವನ್ನು ಇಲ್ಲಿಯ ಬಹುತೇಕ ಲೇಖನಗಳು ಚರ್ಚಿಸುತ್ತವೆ’ ಎಂದು ಪ್ರಶಂಸಿಸಿದ್ದಾರೆ.
©2024 Book Brahma Private Limited.