ಲೇಖಕ ಸಿ.ಪಿ.ನಾಗರಾಜ ಅವರ ಕೃತಿ ‘ಸರ್‍ವಜ್ಞ ಮತ್ತು ಅಲ್ಲಮ ವಚನಗಳ ಓದು’. ಈ ಮೊದಲು ಎರಡು ಚಿಕ್ಕ ಪುಸ್ತಕಗಳ ರೂಪದಲ್ಲಿ ಪ್ರಕಟವಾಗಿದ್ದ ಸರ್ವಜ್ಞ ಮತ್ತು ಅಲ್ಲಮ ವಚನಗಳನ್ನು ಜತೆಗೂಡಿಸಿ, ಈ ಕೃತಿಯನ್ನು ಹೊರತರಲಾಗಿದೆ. ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪನವರು 'ವಚನಕಾರರ ವಿಚಾರ ಕ್ರಾಂತಿ' ಎಂಬ ಬರಹದಲ್ಲಿ ಹೇಳಿರುವ ಕೆಲವು ನುಡಿಗಳನ್ನು ಮುನ್ನುಡಿಯ ರೂಪದಲ್ಲಿ ಬಳಸಿಕೊಳ್ಳಲಾಗಿದೆ. ಕೃತಿಯ ಪರಿವಿಡಿಯಲ್ಲಿ ಅಕ್ಕರವ ಕಲಿತಾತ ಒಕ್ಕಲನು ತಿನಕಲಿತ, ಅಡಿಗಳು ಏಳವು ನುಡಿಗಳು ತೋರಲು, ಅನ್ನ ದೇವರಿಗಿಂತ ಇನ್ನು ದೇವರು ಇಲ್ಲ, ಅನ್ನವನಿಕ್ಕುವುದು ಸನ್ನಿಯ ನುಡಿವುದು, ಆಡದೆ ಮಾಡುವವ ರೂಢಿಯೊಳಗುತ್ತಮನು, ಆರೈದು ನಡೆವವನು ಆರೈದು ನುಡಿವವನು, ಆಳಾಗ ಬಲ್ಲವನು ಆಳುವನು ಅರಸಾಗಿ, ಇಚ್ಛೆಯನರಿದಿತ್ತ ನುಚ್ಚೊಂದು ಮಾಣಿಕ್ಯ, ಇಟ್ಟಿಯಲಿ ಇರಿದೇರು ನೆಟ್ಟನೊಂದಾಗಿಕ್ಕು, ಒಡಲ ದಂಡಿಸಿ ಮುಕ್ತಿಪಡೆವೆನೆಂಬವನೆಗ್ಗ,ಒಲೆಗುಂಡನೊಬ್ಬನು ಮೆಲಬಹುದೆಂದರೆ ಇಂತಹ ತೊಂಭತ್ತು ವಚನಗಳ ಪದಗಳನ್ನು ಬಿಡಿಸಿ ಬರೆದು, ಪದಗಳ ತಿರುಳನ್ನು ತಿಳಿಸಿ, ವಚನದ ಸಾಲುಗಳ ಇಂಗಿತವನ್ನು ನಾಲ್ಕಾರು ವಾಕ್ಯಗಳಲ್ಲಿ ಬರೆಯಲಾಗಿದೆ.
©2024 Book Brahma Private Limited.