ಫ.ಗು.ಹಳಕಟ್ಟಿ ಅವರು ಬರೆದ ಕೃತಿ-ಸಂಗನ ಬಸವೇಶ್ವರ ವಚನಗಳು. ವೀರಶೈವರ ಆಚಾರಗಳಿಗೆ ಸಂಬಂಧಿಸಿದಂತೆ ಸಂಗನಬಸವೇಶ್ವರ ವಚನಗಳು ಬಹು ಪ್ರಾಮುಖ್ಯತೆ ಪಡೆದಿವೆ. ಅದರಲ್ಲೂ, ಅಷ್ಟಾವರಣಗಳ ಆಂತರ್ಯ ವಿಚಾರಗಳು ಈ ವಚನಗಳಲ್ಲಿ ಹೇರಳವಾಗಿವೆ. ವೀರಶೈವ ರಲ್ಲಿ ವಚನಗಳ ಅಧ್ಯಾಯನ ಪೃವೃತ್ತಿ ಕಡಿಮೆಯಾಗುತ್ತಿರುವ ಬಗ್ಗೆಯೂ ವಿಷಾದ ವ್ಯಕ್ತಪಡಿಸಿರುವ ಲೇಖಕರು, ವಚನಗಳ ಸಾರವನ್ನು ಅತ್ಯಂತ ಸರಳವಾಗಿ ವಿವರಿಸಿದ್ದಾಗಿ ಪ್ರಸ್ತಾವನೆಯಲ್ಲಿ ಹೇಳಿದ್ದಾರೆ. ಗುರು-ಲಿಂಗ-ಜಂಗಮ-ಪಾದೋದಕ-ಪ್ರಸಾದ-ದೀಕ್ಷಾ ವಿಧಿಯ ತತ್ವಗಳು, ಎಂಟು ಆವರಣಗಳ ವಿಚಾರಗಳು, ಸಮಾಧಿಯ ವಿಧಗಳು, ಅಂತ್ಯವಿಧಿ, ನವಲಿಂಗ ಪೂಜೆ ಕ್ರಮ ಇತ್ಯಾದಿ ಪರಿಕಲ್ಪನೆಗಳ ಸಂಪೂಣ್ ವಿವರಗಳನ್ನು ಸರಳವಾಗಿ ನೀಡಿದ್ದು ಈ ಕೃತಿಯ ವೈಶಿಷ್ಟ್ಯ.
©2024 Book Brahma Private Limited.