‘ಸಬರದ ಬಸವನ ವಚನಗಳು’ ಲೇಖಕ ಡಾ. ಬಸವರಾಜ ಸಬರದ ಅವರ ವಚನಗಳ ಸಂಕಲನ. ಈ ಕೃತಿಗೆ ಹಿರಿಯ ಸಾಹಿತಿ ಡಾ. ದೊಡ್ಡರಂಗೇಗೌಡ ಅವರ ಬೆನ್ನುಡಿ ಬರಹವಿದೆ. ಇಲ್ಲಿನ ವಚನಗಳು ನಿಸರ್ಗದ ನಿಯತಿಗಳನ್ನು ಅರಿತುಕೊಳ್ಳುವ ಪ್ರಯತ್ನವಿದೆಯ ಪ್ರಪಂಚದ ವಿಸ್ಮಯಗಳಿವೆ. ವೈಜ್ಞಾನಿಕವಾದ ವೈಚಾರಿಕವಾದ ತರ್ಕಗಳಾಚೆಗೂ ಬೆರಗುಗೊಳಿಸುವ ಸಂಗತಿಗಳು ಹೇಗೆ ಜರಗುತ್ತವೆ ಎಂಬುದರ ಪ್ರಸ್ತಾಪವಿದೆ. ಅಂಥ ಕಡೆ ನುಡಿ ಬೆಡಗು ಹೇಗೆ ಅನಾಯಾಸವಾಗಿ ಅಯಾಚಿತವಾಗಿ ಪದ ಪದದಲ್ಲೂ ಮೂಡಿ ಸಹಜ ಕಾವ್ಯ ಸ್ಪುರಿಸುತ್ತದೆ ಎಂಬುದರ ಉದಾಹರಣೆ ಇದೆ (ವಚನ-9) (ಬೆರಗಿನ ವಚನ ವಿಭಾಗ) ಕವಿಯಲ್ಲಿ ಲೇಖನಿ ಭಾವುಕವಾಗಿ ಸ್ಪೂರ್ತಿಯುತವಾಗಿ ಹರಿವಾಗ ಹೇಗೆ ಆಶ್ಚರ್ಯಗಳೂ ವಚನಗಳ ಅಂತರ್ಯದಲ್ಲಿ ಉದ್ಭವಿಸಿ ಸಾರ್ವತ್ರಿಕ ಸತ್ಯಗಳ ಸಾರುತ್ತದೆ ಎಂಬುದಕ್ಕೆ ಇಲ್ಲಿ ನಿದರ್ಶನಗಳಿವೆ. (ವಚನ 29 ಹುಟ್ಟಿ ಸಾಯುವವರ ನಡುವೆ ಕೋಟೆ ಕಟ್ಟಿದವರ್ಯಾರು) ಒಗಟುಗಳಿವೆ, ಬೆಡಗಿನ ಪರಿ ಪಡಿ ನುಡಿಗಳಿವೆ.
ಗಿರಿಯ ಮೇಲೆ ಗೊರವನೋ, ಗೊರವನೊಳಗೆ ಗಿರಿಯೋ ಬಿಡಿಸಿಹೇಳಲಾಗದ ನಿಗೂಢಗಳು, ಪವಾಡ ಸದೃಶ್ಯ ಪದಮಾಲೆಗಳೂ ಇವೆ. ಕವಿ ಸಬರದ ಸಮಾನ ಮನಸ್ಕರ ಜೊತೆ ಸಮಾಲೋಚನೆಯನ್ನೂ ನಡೆಸಿದ್ದಾರೆ. ಸಾಹಿತ್ಯದ ಮೂಲಕ ಸಂವಾದವನ್ನೂ ನಡೆಸಿದ್ದಾರೆ. ಎಲ್ಲಕ್ಕೂ ಮಿಗಿಲಾಗಿ ತಮ್ಮ ಸಾಹಿತ್ಯದ ಮೂಲಕ ಸಂವಾದವನ್ನೂ ನಡೆಸಿದ್ದಾರೆ, ಎಲ್ಲಕ್ಕೂ ಮಿಗಿಲಾಗಿ ತಮ್ಮ ವಚನಗಳಲ್ಲಿ, ಲಯಬದ್ಧ ರಚನೆಗಳಲ್ಲಿ, ಅನಂತ ಬಗೆಯ ಪದರ ಪದರಗಳನ್ನು ತೆರೆದು ತಾವೆತ್ತಿಕೊಂಡ ವಿಷಯದ ಸಮಗ್ರ ದರ್ಶನ ಮಾಡಿಸುತ್ತಾರೆ. ಇದು ತೆರೆದು ತಾವೆತ್ತಿಕೊಂಡ ವಿಷಯದ ಸಮಗ್ರ ದರ್ಶನ ಮಾಡಿಸುತ್ತಾರೆ ಇದು ಒಂದು ಬಗೆಯಲ್ಲಿ ಬೇಲೂರು ಹಳೇಬೀಡಿನ ಕುಶಲ ಕಲೆ ಕೆತ್ತನೆಯ ಹಾಗೇ ರಾಜಾಸ್ತಾನಿ ಚಿಕಣಿ ಕಲೆಯ ಹಾಗೆ, ಸೂಕ್ಷ್ಮಾತಿ ಸೂಕ್ಷ್ಮ ಅಭಿವ್ಯಕ್ತಿಯ ಅನಾವರವಣ. ವಚನಕಾಲ ಶ್ರೀ ಸಬರದ ಅವರು ಒಳಗಿನದನ್ನು ಕಾಣಹೊರಟರು. ಇಂದು ಎಲ್ಲರೂ ಹೊರಗಿನದನ್ನು ಕಾಣಹೋಗುತ್ತಾರೆ. ಜನ ಸಾಮಾನ್ಯರಿಗೂ, ಕವಿಗೂ ಅದೇ ವ್ಯತ್ಯಾಸ (ವಚನ 13) ಸಬರದ ಬಸವ ಅಂಕಿತದಲ್ಲಿ ವಚನ ಹಾಡಿಕೊಳ್ಳುವ ಈ ನವಯುಗದ ಕವಿ ಮನುಷ್ಯನ ಗುಣಗಳನ್ನು ತೀಕ್ಷ್ಣವಾಗಿ ಒರೆಗಲ್ಲಿಗೆ ಹೆಚ್ಚಿ ನೋಡುವ ಬುದ್ಧಿಯುಳ್ಳವನು. ಆದ್ದರಿಂದಲೇ ಅದು ಹಿಡಿಯದೆ ಬೇಟೆ ಮಾಡುವ ಮನುಷ್ಯ ಪ್ರಾಣಿ ಬಗ್ಗೆ ರೂಕ್ಷವಾಗಿ ಬರೆಯುತ್ತಾರೆ ಎಂದು ದೊಡ್ಡರಂಗೇಗೌಡ ಅವರು ಮೆಚ್ಚುಗೆ ಸೂಚಿಸಿದ್ದಾರೆ.
©2024 Book Brahma Private Limited.