ರಾಯಚೂರು ಜಿಲ್ಲೆಯ ಆಧುನಿಕ ವಚನ ಸಾಹಿತ್ಯ

Author : ಹಣಮಂತ ಬಿ. ಮೇಲಕೇರಿ

Pages 84

₹ 100.00




Year of Publication: 2020
Published by: ಮಾತೋಶ್ರೀ ಈರಮ್ಮ ವಡ್ಡನಕೇರಿ ಪ್ರತಿಷ್ಠಾನ
Address: ಡೋಂಗರಗಾಂವ, ತಾಲೂಕು ಕಮಲಾಪುರ, ಕಲಬುರಗಿ ಜಿಲ್ಲೆ.
Phone: 9972869340

Synopsys

ಲೇಖಕ ಡಾ. ಹಣಮಂತ ಬಿ ಮೇಲಕೇರಿ ಅವರ ’ರಾಯಚೂರು ಜಿಲ್ಲೆಯ ಆಧುನಿಕ ಸಾಹಿತ್ಯ’ ಕೃತಿಯು ಜೀವಪರ ಮತ್ತು ಜನಪದ ಮಾನವೀಯ ಮೌಲ್ಯಗಳನ್ನು ಒಳಗೊಂಡಿದೆ. ಕೃತಿಗೆ ಮುನ್ನುಡಿ ಬರೆದಿರುವ ಎಂ. ನಾಗರಾಜ ಅವರು, ‘ಕನ್ನಡ ಸಾಹಿತ್ಯದ ಎರಡು ಕಣ್ಣಗಳೆಂದು ಗುರುತಿಸಿಕೊಂಡಿರುವ ವಚನ ಸಾಹಿತ್ಯ ಮತ್ತು ದಾಸ ಸಾಹಿತ್ಯ ಪ್ರಕಾರಗಳು ಈ ನೆಲದ ಬದುಕು ಹೌದು. ಬೆಳಕು ಹೌದು , ಕಲ್ಯಾಣ ಕರ್ನಾಟಕದಲ್ಲಿಯೇ ರಾಯಾಚೂರು ಜಿಲ್ಲೆಯು ಬಹಳ ವಿಶಿಷ್ಟವಾದ ಜಿಲ್ಲೆಯಾಗಿದೆ. ಇಲ್ಲಿನ ಸಾಹಿತ್ಯ ಸಂಸ್ಕೃತಿ , ಧರ್ಮ ಹಾಗೂ ಶೈಕ್ಷಣಿಕ, ಐತಿಹಾಸಿಕವಾಗಿ ಪರಂಪರೆಯನ್ನು ಪಡೆದುಕೊಡಿದೆ. ಹಾಗೆಯೇ, ಕನ್ನಡ ಸಾಹಿತ್ಯದ ತವರು ಮನೆ ಎಂದು ಹೆಸರಾದ ಈ ಜಿಲ್ಲೆಗೆ ಬಿ.ಎಂ. ಶ್ರೀಯವರು ‘ಕನ್ನಡದ ಕಾಶಿ’ ಎಂದು ಕರೆದಿದ್ದಾರೆ. ಈ ನಾಡಿನಲ್ಲಿ ಶರಣರು, ದಾಸರು ಇವರನ್ನೆಲ್ಲ ಸಮನ್ವಯಕ್ಕೆ ಸುಂದರ ದೃಷ್ಟಾಂತವಾಗಿದೆ ಎಂದು ಹೇಳಬಹುದಾಗಿದೆ. ನಾವು ಸಮಾಜದಲ್ಲಿ ಹೇಗೆ ವರ್ತಿಸಬೇಕೆಂದು ವಚನಗಳು ತಿಳಿಸುತ್ತದೆ’ ಎಂದು ಅಭಿಪ್ರಾಯ ಪಟ್ಟಿದ್ದಾರೆ..

 

About the Author

ಹಣಮಂತ ಬಿ. ಮೇಲಕೇರಿ

ಡಾ. ಹಣಮಂತ ಬಿ. ಮೇಲಕೇರಿ ಅವರು ಮೂಲತಃ ಬೀದರ ಜಿಲ್ಲೆಯ ಹುಮನಾಬಾದ ತಾಲ್ಲೂಕಿನ ಮದರಗಿ ಗ್ರಾಮದವರು. ಎಂ.ಎ, ಎಂ.ಫಿ.ಎಲ್, ಪಿ.ಎಚ್.ಡಿ ಪದವೀಧರರು. ಕನ್ನಡ ಸಾಹಿತ್ಯ ಚರಿತ್ರೆ, ಆಧುನಿಕ ವಚನ ಸಾಹಿತ್ಯ, ಜೀವನ ಚರಿತ್ರೆ, ಸಂಪಾದನೆ ಹೀಗೆ ಅನೇಕ ಪ್ರಕಾರಗಳಲ್ಲಿ ಕೃಷಿ ಮಾಡಿದ್ದು, ಪ್ರಸ್ತುತ ಗುಲಬರ್ಗಾ ವಿಶ್ವವಿದ್ಯಾಲಯ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಕನ್ನಡ ಅತಿಥಿ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕೃತಿಗಳು: ರಾಯಚೂರು ಜಿಲ್ಲೆಯ ಆಧುನಿಕ ವಚನ ಸಾಹಿತ್ಯ ಪ್ರಶಸ್ತಿ-ಪುರಸ್ಕಾರಗಳು: ಆಧುನಿಕ ವಚನ ಶ್ರೀ ಪ್ರಶಸ್ತಿ, ಕಲ್ಯಾಣ ಚನ್ನಶ್ರೀ ಪ್ರಶಸ್ತಿ, ಬುದ್ಧಚೇತನ ಸಂಶೋಧಕ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಅಂಬೇಡ್ಕರ್‍ ರತ್ನ ಪ್ರಶಸ್ತಿ , ...

READ MORE

Related Books