ಡಾ. ಹಣಮಂತ ಬಿ. ಮೇಲಕೇರಿ ಅವರು ಮೂಲತಃ ಬೀದರ ಜಿಲ್ಲೆಯ ಹುಮನಾಬಾದ ತಾಲ್ಲೂಕಿನ ಮದರಗಿ ಗ್ರಾಮದವರು. ಎಂ.ಎ, ಎಂ.ಫಿ.ಎಲ್, ಪಿ.ಎಚ್.ಡಿ ಪದವೀಧರರು. ಕನ್ನಡ ಸಾಹಿತ್ಯ ಚರಿತ್ರೆ, ಆಧುನಿಕ ವಚನ ಸಾಹಿತ್ಯ, ಜೀವನ ಚರಿತ್ರೆ, ಸಂಪಾದನೆ ಹೀಗೆ ಅನೇಕ ಪ್ರಕಾರಗಳಲ್ಲಿ ಕೃಷಿ ಮಾಡಿದ್ದು, ಪ್ರಸ್ತುತ ಗುಲಬರ್ಗಾ ವಿಶ್ವವಿದ್ಯಾಲಯ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಕನ್ನಡ ಅತಿಥಿ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಕೃತಿಗಳು: ರಾಯಚೂರು ಜಿಲ್ಲೆಯ ಆಧುನಿಕ ವಚನ ಸಾಹಿತ್ಯ
ಪ್ರಶಸ್ತಿ-ಪುರಸ್ಕಾರಗಳು: ಆಧುನಿಕ ವಚನ ಶ್ರೀ ಪ್ರಶಸ್ತಿ, ಕಲ್ಯಾಣ ಚನ್ನಶ್ರೀ ಪ್ರಶಸ್ತಿ, ಬುದ್ಧಚೇತನ ಸಂಶೋಧಕ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಅಂಬೇಡ್ಕರ್ ರತ್ನ ಪ್ರಶಸ್ತಿ , ಶಿಕ್ಷಣ ಸೇವಾ ರತ್ನ ಪ್ರಶಸ್ತಿ ಲಭಿಸಿವೆ.