ಲೇಖಕ ರಂಜಾನ್ ದರ್ಗಾ ಅವರು ಬರೆದ ಕೃತಿ-ನಡೆ ನುಡಿ ಸಿದ್ಧಾಂತ. ಶರಣರ ಜೀವಾಳವೇ-ನಡೆ ನುಡಿ-ಎರಡೂ ಒಂದಾಗಿಸುವುದು. ಅಂತರಂಗ-ಬಹಿರಂಗದಲ್ಲಿ ಯಾವುದೇ ವ್ಯತ್ಯಾಸ ಇರಕೂಡದು. ಇದ್ದರೆ ಅಂತಹ ವ್ಯಕ್ತಿತ್ವ ದೇವರಿಗೆ ಮೆಚ್ಚುಗೆಯಾಗದು ಎಂಬ ದೃಢ ಎಚ್ಚರಿಕೆಯ ಬದುಕು ಶರಣರದ್ದು, ನಡೆ-ನುಡಿಯ ಸಿದ್ಧಾಂತವನ್ನು ಜೀವನದ ಉಸಿರಾಗಿಸಿಕೊಂಡ ಶರಣರ ಪ್ರಾಂಜಲ ಬದುಕು, ನಿರ್ಮಲ ಮನಸ್ಸಿನ ಸ್ವರೂಪ, ಭಕ್ತಿ ಭಾವದ ತನ್ಮಯತೆ, ಪರರ ತೃಪ್ತಿಯಲ್ಲೇ ಸಂತೃಪ್ತಿ ಕಾಣುವ ಅಲೌಕಿಕ ಮನಸ್ಸು ಇಂತಹ ವಿಚಾರಗಳ ವಿಶ್ಲೇಷಣೆ ಈ ಕೃತಿ.
©2024 Book Brahma Private Limited.