‘ಮನದ ವಚನಗಳು’ ಲೇಖಕ ಡಾ.ಸತೀಶ ಕುಮಾರ್ ಹೊಸಮನಿ ಅವರ ಆಧುನಿಕ ವಚನಗಳ ಸಂಕಲನ. ಗ್ರಂಥಾಲಯ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿರುವ ಸತೀಶ ಕುಮಾರ್ ಹೊಸಮನಿ ತಮ್ಮ ಖೇಳಗಿಯ ಆರಾಧ್ಯದೈವ ಶ್ರೀಶಿವಲಿಂಗೇಶ್ವರ ಅಂಕಿತನಾಮವಾಗಿಸಿಕೊಂಡು ವಚನಗಳನ್ನು ರಚಿಸಿದ್ದಾರೆ.
ತಮ್ಮ ನೆಲ ಮೂಲದ ದೈವ ಸಂಸ್ಕೃತಿಯನ್ನು ಸಿಲಿಕಾನ್ ಸಿಟಿಯಲ್ಲಿದ್ದರೂ ನೆನಪಿಸಿಕೊಂಡು ಆರಾಧಿಸಿದ್ದು ಕಂಡು ಬರುತ್ತದೆ. ಇಲ್ಲಿಯ ವಚನಗಳಲ್ಲಿ ವೈವಿಧ್ಯತೆ ಇದೆ. ಹತ್ತು ಹಲವು ವಸ್ತು ವಿಷಯಗಳನ್ನು ಬಳಕೆ ಮಾಡಿಕೊಂಡಿದ್ದಾರೆ. ಹೊಸಮನಿ ಅವರ ವಚನಗಳು ಸಹಜತೆಯಿಂದ ಕೂಡಿವೆ. ಜಾತಿ ಪದ್ಧತಿ, ಅಸ್ಪೃಶ್ಯತೆ, ಅವಮಾನಗಳನ್ನು ನೇರವಾಗಿ ಹೇಳಿದ್ದಾರೆ. ಇಲ್ಲಿಯ ವಚನಗಳಲ್ಲಿ ಅಸಮಾನತೆಯನ್ನು ಪ್ರಶ್ನಿಸಿದ್ದಾರೆ. ಒಡಲಾಳದ ನೋವುಗಳನ್ನೂ ಹಂಚಿಕೊಂಡಿದ್ದಾರೆ.
©2024 Book Brahma Private Limited.