ಕವಿ ಲಿಂಗಾರೆಡ್ಡಿ ಶೇರಿ ಅವರ ಕೃತಿ ಗುಡ್ಡದ ಮೈಲಾರಲಿಂಗನ ವಚನಗಳು. ಯಾದಗಿರಿ ಜಿಲ್ಲೆಯ ಹಾಗೂ ಯಾದಗಿರಿ ಸಮೀಪದ ಮೈಲಾರಲಿಂಗನ ಗುಡ್ಡ ಎಂದೇ ಖ್ಯಾತಿಯ ಈ ಸ್ಥಳದ (ಮೈಲಾರ) ಮಹಿಮೆಯೂ ಪ್ರಸಿದ್ಧಿ ಪಡೆದಿದೆ. ಲೇಖಕರ ಕುಲದೈವ ಗುಡ್ಡದ ಮೈಲಾರಲಿಂಗನ ಹೆಸರಲ್ಲಿ(ಅಂಕಿತ ನಾಮದೊಂದಿಗೆ) 290 ವಚನಗಳನ್ನು ಈ ಸಂಕಲನದಲ್ಲಿ ಸೇರ್ಪಡೆಗೊಳಿಸಿದ್ದು, ಓದುಗರ ಗಮನ ಸೆಳೆಯುತ್ತದೆ. ಸಾಮಾಜಿಕ ವಿದ್ಯಮಾನಗಳು, ಕೌಟುಂಬಿಕ ವ್ಯವಹಾರಗಳು, ಅಧ್ಯಾತ್ಮಿಕ, ತಾರ್ಕಿಕ ವಿಷಯಗಳು ವಚನಗಳ ವಸ್ತುಗಳಾಗಿವೆ.
ಸಾಹಿತಿ ಡಾ. ಜಯಶ್ರೀ ದಂಡೆ ಅವರು ಕೃತಿಗೆ ಮುನ್ನುಡಿ ಬರೆದು ‘ಲಿಂಗಾರೆಡ್ಡಿ ಅವರ ವಚನಗಳಲ್ಲಿ ಒಂದು ಮಾಂತ್ರಿಕತೆ ಇದೆ. ಅವರ ಲೋಕಜ್ಞಾನ ವಿಸ್ತಾರವಾಗಿದೆ. ದೇಸಿಯತೆಯ ಪರಿಣಿತಿ ಇದೆ. ನಾಣ್ಣುಡಿಗಳಂತಹ ಮಾತುಗಳನ್ನು, ಜಾನಪದ ಕಾವ್ಯದ ತಿರುಳನ್ನು,ಬಂಡಾಯದ ಧೋರಣೆಯನ್ನು, ವಿಡಂಬನೆಯ ಮೊನಚನ್ನು, ಸಾಮಾಜಿಕ-ಧಾರ್ಮಿಕ-ಕೌಟುಂಬಿಕ ಕಾಳಜಿಯನ್ನು,ಸೌಹಾರ್ದತೆಯ ಕನಸನ್ನು, ಸಂಬಂಧಗಳ ಬಂಧುರತೆಯನ್ನು, ಸ್ವಭಾವಗಳ ಭಿನ್ನತೆಯನ್ನು, ವಚನಗಳಿಗೆ ವಸ್ತುವಾಗಿರಿಸಿಕೊಂಡಿದ್ದಾರೆ. ವಚನಗಳ ಭಾಷೆ ಸರಳ-ಸುಂದರವಾಗಿದೆ. ಥಟ್ಟನೆ ಮನ ಮುಟ್ಟುವ ಶೈಲಿ ಇದೆ’ ಎಂದು ಪ್ರಶಂಸಿಸಿದ್ದಾರೆ.
©2024 Book Brahma Private Limited.