ಬಸವ ವಚನ ಭಾವಯಾನ

Author : ಕೆ.ಬಿ. ಮಲ್ಲೇಶಯ್ಯ

Pages 276

₹ 210.00




Year of Publication: 2018
Published by: ಅರವಿಂದ್ ಇಂಡಿಯಾ
Address: ಬೆಂಗಳೂರು

Synopsys

‘ಬಸವ ವಚನ ಭಾವಯಾನ’ ಎಂಬುದು ಲೇಖಕ ಕೆ.ಬಿ. ಮಲ್ಲೇಶಯ್ಯ ಅವರ ಕೃತಿ. ಬಸವಣ್ಣನವರ ಷಟ್ ಸ್ಠಲ ವಚನಗಳಿಗೆ ಭಾವಾರ್ಥ ಎಂಬುದು ಕೃತಿಗೆ ನೀಡಿರುವ ಉಪಶೀರ್ಷಿಕೆ. ಮನುಷ್ಯನನ್ನು ಐಹಿಕ ಸುಖಭೋಗಗಳಿಂದ ಮುಕ್ತಿಯತ್ತ ಕರೆದೊಯ್ಯುವ ವಿಶೇಷ ಮಾರ್ಗಗಳನ್ನು ಶಿವಶರಣರ ವ್ಯಾಖ್ಯಾನದಲ್ಲಿ ಷಟಸ್ಥಲಗಳು. ಈ ಷಟಸ್ಥಲಗಳ ಭಾವಾರ್ಥವನ್ನು ಸರಳೀಕರಣಗೊಳಿಸಿದ್ದು ಈ ಕೃತಿಯ ವಿಶೇಷ. ಷಟಸ್ಥಲ. ಷಟಸ್ಥಲ ಪದದಲ್ಲಿ "ಷಟ್" ಅಂದರೆ ಆರು "ಸ್ಥಲ" ಅಂದರೆ ಹಂತ. ಭವಿಯು (ಮಾನವ) ತನ್ನ ಹುಟ್ಟು ಸಾವುಗಳೆಂಬ ಭವಚಕ್ರವನ್ನು ಭೇದಿಸಿ ದೇವರಲ್ಲಿ ಒಂದಾಗಲು 12ನೇ ಶತಮಾನದ ಶರಣರು ಆಚರಿಸಿ ಸೂಚಿಸಿದ ಆರು ಹಂತಗಳ ಪಥವೇ "ಷಟಸ್ಥಲ". ಅವುಗಳನ್ನು ಹೀಗೆ ಗುರುತಿಸಿದ್ದಾರೆ; ಭಕ್ತ, ಮಹೇಶ, ಪ್ರಸಾದಿ, ಪ್ರಾಣಲಿಂಗಿ, ಶರಣ ಹಾಗೂ ಐಕ್ಯ ಎಂಬುದು.

About the Author

ಕೆ.ಬಿ. ಮಲ್ಲೇಶಯ್ಯ

ಚಿಂತಕ ಕೆ.ಬಿ. ಮಲ್ಲೇಶಯ್ಯ ಶರಣ-ವಚನ ಸಾಹಿತ್ಯ ಬರಹಗಾರರು.  ಕೃತಿಗಳು: ಬಸವ ವಚನ ಭಾವಯಾನ, ಕಮ್ಮಟ ಕೀಲಿ, ಸರ್ವಜ್ಞ ವಚನ ನಿರ್ವಚನ ...

READ MORE

Related Books