‘ಆಯ್ದಕ್ಕಿ ಮಾರಯ್ಯ ಲಕ್ಕಮ್ಮ ದಂಪತಿಗಳು: ಒಂದು ಅಧ್ಯಯನ’ ಕೃತಿಯು ಮೀನಾಕುಮಾರಿ ಎಸ್. ಪಾಟೀಲ ಅವರ ಅಧ್ಯಯನ ಕೃತಿಯಾಗಿದೆ. ಈ ಕೃತಿಗೆ ಬೆನ್ನುಡಿ ಬರೆದಿರುವ ಬಸವರಾಜ ಸಬರದ ಅವರು, `ವಚನಸಾಹಿತ್ಯ ಕುರಿತಂತೆ ಇಂದು ಅನೇಕ ರೀತಿಯ ಅಧ್ಯಯನಗಳು ನಡೆದಿವೆ. ಹಲವಾರು ಕೃತಿಗಳು ಪ್ರಕಟವಾಗಿವೆ. ಆದರೆ ಬಹಳಷ್ಟು ಕೃತಿಗಳು ಪರಿಚಯಾತ್ಮಕವಾಗಿವೆ. ವಿಷಯದ ವಿವರಣೆಯಿಂದ ತುಂಬಿಕೊಂಡಿವೆ. ವಿಮರ್ಶಾತ್ಮಕವಾದ, ಸಂಶೋಧನಾತ್ಮಕವಾದ ಮಹಾಪ್ರಬಂಧಗಳು ತುಂಬಾ ವಿರಳವಾಗಿವೆ. ವಚನ ಸಾಹಿತ್ಯದ ಬಗೆಗೆ ಮಾತನಾಡುವುದು, ಬರೆಯುವುದು ಇಂದು ತುಂಬಾ ಸರಳವಾಗಿದೆ. ಆದರೆ ಆ ಮಾತುಗಳಲ್ಲಿ, ಬರಹಗಳಲ್ಲಿ ಸೂಕ್ಷ್ಮ ಒಳನೋಟಗಳಿರುವುದಿಲ್ಲ. ಬೆರಳೆಣಿಕೆಯಷ್ಟು ಲೇಖಕರು ಮಾತ್ರ ಅಂತಹ ಸಾಧನೆ ಮಾಡಿದ್ದಾರೆ. ಈ ದಿಶೆಯಲ್ಲಿ 'ಆಯ್ದಕ್ಕಿ ಮಾರಯ್ಯ-ಲಕ್ಕಮ್ಮ ದಂಪತಿಗಳ ಬದುಕು-ಬರಹ' ಎಂಬ ಕೃತಿಯ ಲೇಖಕ ಡಾ. ಮೀನಾಕುಮಾರಿ ಪಾಟೀಲ ಅವರ ಸಾಧನೆ ಅಪೂರ್ವ’ ಎಂದಿದ್ದಾರೆ.
©2024 Book Brahma Private Limited.