ಆಯ್ದ ವಚನಗಳು

Author : ಎಸ್.ಎಂ. ಹಿರೇಮಠ

Pages 144

₹ 50.00




Year of Publication: 2004
Published by: ಪ್ರಸಾರಾಂಗ
Address: ಗುಲಬರ್ಗಾ ವಿಶ್ವವಿದ್ಯಾಲಯ

Synopsys

‘ಆಯ್ದ ವಚನಗಳು’ ಸಂಗಮೇಶ ಸವದತ್ತಿಮಠ ಮತ್ತು ಎಸ್‌. ಎಂ. ಹಿರೇಮಠ ಅವರು ಸಂಪಾದಿಸಿರುವ ವಚನಗಳ ಸಂಗ್ರಹವಾಗಿದೆ. ಇಪ್ಪತ್ತು ವಚನಕಾರರ ಪ್ರಾತಿನಿಧಿಕ ವಚನಗಳನ್ನು ಇಲ್ಲಿ ಸಂಗ್ರಹಿಸಲಾಗಿದೆ. ವಚನಗಳ ಆಯ್ಕೆಯಲ್ಲಿ ಉತ್ತಮ ಗುಣಮಟ್ಟವಿದೆ. ಹೀಗಾಗಿ ವಚನ ಸಾಹಿತ್ಯದ ಓದಿಗೆ ಇದು ಒಂದು ಉತ್ತಮ ಪ್ರವೇಶಿಕೆಯಾಗಿದೆ. ಎಸ್. ಎಂ. ಹಿರೇಮಠ ಅವರು ವಚನ ಸಾಹಿತ್ಯದ ಬಗ್ಗೆ ಪ್ರಸ್ತಾವನೆಯನ್ನು ಬರೆದಿದ್ದು ಅಂತಹ ಹೊಸ ವಿಚಾರಗಳನ್ನು ಹೇಳದಿದ್ದರೂ ವಿದ್ಯಾರ್ಥಿಗಳಿಗೆ ಪರೀಕ್ಷೆಯ ದೃಷ್ಟಿಯಿಂದ ಉಪಯುಕ್ತ ವಾಗಿದೆ.

About the Author

ಎಸ್.ಎಂ. ಹಿರೇಮಠ

ಎಂ. ಎಸ್. ಹಿರೇಮಠ ಅವರು ಕಲಬುರ್ಗಿ ಜಿಲ್ಲೆಯ ಆಳಂದ ತಾಲೂಕಿನ ನಿಂಬರಗಿಯಲ್ಲಿ 1956 ಜುಲೈ 22 ಜನಿಸಿದರು. ತಂದೆ ಪುರಾಣರತ್ನ ಮಹಾಂತಸ್ವಾಮಿ. ತಾಯಿ ನೀಲಮ್ಮ. ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ತಮ್ಮ ಹುಟ್ಟಿದೂರಿನಲ್ಲೇ ಪೂರೈಸಿದ ಅವರು ಬಿ. ಎ. ಪದವಿಯನ್ನು ಕಲಬುರಗಿಯ ಶ್ರೀ ಬಸವೇಶ್ವರ ಮಹಾವಿದ್ಯಾಲಯದಲ್ಲಿ ಪಡೆದರು. ಕಲಬುರಗಿಯ ಕರ್ನಾಟಕ ವಿಶ್ವವಿದ್ಯಾಲಯ ಸ್ನಾತಕೋತ್ತರ ಕೇಂದ್ರದಲ್ಲಿ ಚಿನ್ನದ ಪದಕದೊಂದಿಗೆ ಕನ್ನಡ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ‘ಶರಣಬಸವೇಶ್ವರರು ಹಾಗೂ ಅವರ ಪರಿಸರದ ಸಾಹಿತ್ಯ’ ಇವರ ಪಿಎಚ್‌.ಡಿ ಮಹಾಪ್ರಬಂಧ. ರಂಗಭೂಮಿಯಲ್ಲೂ ಆಸಕ್ತಿ ಹೊಂದಿದ್ದ ಹಿರೇಮಠರು ಬೆಂಗಳೂರಿನ ಆದರ್ಶ ಫಿಲಂ ಚಲನಚಿತ್ರ ...

READ MORE

Reviews

ಹೊಸತು- ಜುಲೈ-2005 

ಈ ಪಠ್ಯಪುಸ್ತಕ 'ಸಾಹಿತ್ಯ ಸಂಕಲನ ಮಾಲೆ'ಯಲ್ಲಿ ಬಂದಿದ್ದು ವಿದ್ಯಾರ್ಥಿಗಳಿಗಷ್ಟೇ ಅಲ್ಲದೆ ವಚನ ಸಾಹಿತ್ಯದಲ್ಲಿ ಆಸಕ್ತಿ ಇರುವ ಎಲ್ಲರಿಗೂ ಉಪಯುಕ್ತವಾಗಿದೆ. ಇಪ್ಪತ್ತು ವಚನಕಾರರ ಪ್ರಾತಿನಿಧಿ ಕ ವಚನಗಳನ್ನು ಇಲ್ಲಿ ಸಂಗ್ರಹಿಸಲಾಗಿದೆ. ವಚನಗಳ ಆಯ್ಕೆಯಲ್ಲಿ ಉತ್ತಮ ಗುಣಮಟ್ಟವಿದೆ. ಹೀಗಾಗಿ ವಚನ ಸಾಹಿತ್ಯದ ಓದಿಗೆ ಇದು ಒಂದು ಉತ್ತಮ ಪ್ರವೇಶಿಕೆಯಾಗಿದೆ. ಎಸ್. ಎಂ. ಹಿರೇಮಠ ಅವರು ವಚನ ಸಾಹಿತ್ಯದ ಬಗ್ಗೆ ಪ್ರಸ್ತಾವನೆಯನ್ನು ಬರೆದಿದ್ದು ಅಂತಹ ಹೊಸ ವಿಚಾರಗಳನ್ನು ಹೇಳದಿದ್ದರೂ ವಿದ್ಯಾರ್ಥಿಗಳಿಗೆ ಪರೀಕ್ಷೆಯ ದೃಷ್ಟಿಯಿಂದ ಉಪಯುಕ್ತ ವಾಗಿದೆ. ವಚನಕಾರರ ಸಂಕ್ಷಿಪ್ತ ಪರಿಚಯ, ಪಾರಿಭಾಷಿಕ ಪದಗಳ ವಿವರಣೆ, ಶಬ್ದಕೋಶ ಸಹ ಪಠ್ಯಪುಸ್ತಕಕ್ಕೆ ಸರಿಯಾದ ಚೌಕಟ್ಟನ್ನು ಒದಗಿಸಿವೆ. ಆದರೂ ಕೆಲವು ಸಂಕೀರ್ಣವಾದ ವಚನಗಳಿಗೆ ಟಿಪ್ಪಣಿ ಕೊಡಬಹುದಾಗಿತ್ತು. ಅಚ್ಚುಕಟ್ಟಾಗಿ ತಪ್ಪಿಲ್ಲದೆ ಪುಸ್ತಕ ಪ್ರಕಟವಾಗಿದ್ದು ಪಠ್ಯಪುಸ್ತಕದ 'ಮಾಮೂಲಿ ಚಹರೆ' ಯಿಂದ ದೂರವಾಗಿರುವುದು ಮೆಚ್ಚಿಗೆಯ ಅಂಶವಾಗಿದೆ.

Related Books