ಲೇಖಕ ಪಂಚಾಕ್ಷರಿ ಬಿ. ಪೂಜಾರಿ ಅವರ ವಚನಗಳ ಸಂಕಲನ. ಸಾಹಿತಿ ಡಾ. ವಿ.ಜಿ. ಪೂಜಾರ ಅವರು ಕೃತಿಗೆ ಮುನ್ನುಡಿ ಬರೆದು ‘ ದಂಡಗುಂಡ ಬಸವಣ್ಣ ದೇವಸ್ಥಾನದ ಆರ್ಚಕರಾಗಿ ದೈವೀ ಭಕ್ತಿ ಪೂಜಾನಿಷ್ಠೆಯಿಂದ ಸಾಹಿತ್ಯ ಶಕ್ತಿ ತಮ್ಮಲ್ಲಿ (ಪಂಚಾಕ್ಷರಿ ಬಿ. ಪೂಜಾರಿ) ಮುಪ್ಪರಿಸಿಕೊಂಡು "ಶ್ರೀಗುರು ದಂಡಗುಂಡ ಬಸವ" ಎಂಬ ಅಂಕಿತನಾಮದಿಂದ ವಚನಗಳು ರಚಿಸಿದ್ದಾರೆ. ಮನುಕುಲದ ಎಳ್ಗೆಯ ಉದ್ದೇಶವನ್ನು ಬೋಧಿಸುವ ನೀತಿಭೋಧೆ ಹಾಸುಹೊಕ್ಕಾಗಿವೆ ಮಾನವಿಯ ಕಳಕಳಿ ವೈಜಾನಿಕ, ವೈಚಾರಿಕ ಮನೋಭಾವದಿಂದಿವೆ ಮೈಲಿಗೆ, ಡಂಭಾಚಾರ,ವೇಷಧಾರಿಗಳನ್ನು ಅವರ ವಚನಗಳಲಿ ವಿಡಂಬಿಸಿದುದು ಸ್ವಾಗತಾರ್ಹವೆನಿಸಿದೆ’ ಎಂದು ಪ್ರಶಂಸಿಸಿದ್ದಾರೆ.
ಸಾಹಿತಿ ಜಿ.ಎಸ್.ಬಸವರಾಜ ಶಾಸ್ತ್ರಿ ಯಾದಗಿರ ತಮ್ಮ ಅಭಿಪ್ರಾಯದಲ್ಲಿ.‘ಪೂಜಾರಿಯವರು ಇಂದಿನ ಸಮಾಜದಲ್ಲಿ "ತುಲಭಾರದ ಬಗ್ಗೆ, ಮತ್ತು ಲಕ್ಷದೀಪೋತ್ಸವದ ಹಾವಳಿಯ ಬಗ್ಗೆ ಕಟುವಾಗಿ ಹೇಳಿ ಸಮಾಜದ ಕುಂದು ಕೊರತೆಗಳನ್ನು ಓರೆ-ಕೊರೆಗಳನ್ನು ಎತ್ತಿ ತೋರಿಸಿದ್ದಾರೆ’ ಎಂದು ಶ್ಲಾಘಿಸಿದ್ದಾರೆ.
ಸಾಹಿತಿ ಬಸವರಾಜ ಚೇಂಗಟಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ ‘"ಜಾತಿ ಜಾತಿಯಂದು ಎತ್ತಿಕಟ್ಟಿ ಸಮಾಜ ಹದಗೆಡಿಸುವ ಕಿಡಿಗೆಡಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ವಚನಕಾರರು ಸಮಾಜದ ಅಂಕು-ಡೊಂಕುಗಳನ್ನು ತಿದ್ದುಲು ಮುಂದಾಗಿರುವುದು ಸ್ತುತ್ಯವಾದ ಕೆಲಸ. ಬಿತ್ತಿದ್ದನೆ ಬೆಳೆಯಬೇಕು ಮಾಡಿದ್ದನು ಉಣ್ಣಬೇಕು ಎಂದು ಎಚ್ಚರಿಸುವ ಇವರ ವಚನಗಳು, ದುಶ್ಚಟದಿಂದ ಪರಸ್ತ್ರೀ ಸಂಗದಿಂದ ದೂರಿರು ಎಂದು ಕಿವಿ ಮಾತು ಹೇಳುತ್ತಾರೆ. ಜಾತಿಯ ಜಾಡು, ಒಣಜಂಭ,ಎಂಬ ವಚನಗಳಲ್ಲಿ ಸಾಮಾಜಿಕ ಕಳಕಳಿ ಇದ್ದು ವಚನಗಳಲ್ಲಿ ಪರಿಪೂರ್ಣತೆ ಕಂಡು ಬರುತ್ತದೆ ’ ಎಂದು ಶ್ಲಾಘಿಸಿದ್ದಾರೆ.
©2024 Book Brahma Private Limited.