‘ಅಂಬಿಗರ ಚೌಡಯ್ಯ’ ಲೇಖಕ ಬಸವರಾಜ ಸಬರದ ಅವರ ಉಪನ್ಯಾಸದ ಪಠ್ಯರೂಪ. ಕೃತಿಯ ಕುರಿತು ತಿಳಿಸುತ್ತಾ 1985ರ ಜನೇವರಿ 12ರಂದು ರಾಯಚೂರ ಜಿಲ್ಲೆಯ ಹಲಗೇರಿಯಲ್ಲಿ ಹದಿನೈದನೇ ಉಪನ್ಯಾಸ ಶಿಬಿರ ನಡೆಯಿತು. ಆ ಸಂದರ್ಭದಲ್ಲಿ ಈ ವಿಷಯದ ಬಗೆಗೆ ಉಪನ್ಯಾಸ ಮಾಡಲು ಪ್ರಸಾರಾಂಗದ ನಿರ್ದೇಶಕರಾದ ಡಾ.ಮ.ಗು. ಬಿರಾದಾರ ಗುರುಗಳು ನನಗೆ ಅವಕಾಶಕೊಟ್ಟರು ಎನ್ನುತ್ತಾರೆ ಲೇಖಕ ಬಸವರಾಜ ಸಬರದ. ಅಂಬಿಗರ ಚೌಡಯ್ಯನವರನ್ನು ಅವರ ವಚನಗಳ ಮುಖಾಂತರ ಹೊಸ ದೃಷ್ಟಿಕೋನದಿಂದ ನೋಡಲು ಇಲ್ಲಿ ಪ್ರಯತ್ನಿಸಿದ್ದೇನೆ, ಇದಕ್ಕೆ ಸಂಬಂಧಿಸಿದಂತೆ ಓದುಗರು-ವಿಮರ್ಶಕರಿಂದ ಬರುವ ರಚನಾತ್ಮಕ ಟೀಕೆಗಳಿಗೆ ಸದಾ ಸ್ವಾಗತ ಎಂದಿದ್ದಾರೆ. ಇಲ್ಲಿ ಹಿನ್ನೆಲೆ, ಚೌಡಯ್ಯನ ದೃಷ್ಟಿಯಲ್ಲಿ ಧರ್ಮ-ದೇವರು, ಚೌಡಯ್ಯನ ವಚನಗಳಲ್ಲಿ ಗುರು-ಲಿಂಗ-ಜಂಗಮ, ಚೌಡಯ್ಯನ ವಚನಗಳಲ್ಲಿ ಸಾಮಾಜಿಕ ವಿಡಂಬನೆ, ಚೌಡಯ್ಯ ಮತ್ತು ಬಂಡಾಯ ಹಾಗೂ ಸಮಾರೋಪ ಎಂಬ ಲೇಖನಗಳು ಸಂಕಲನಗೊಂಡಿವೆ.
©2024 Book Brahma Private Limited.