ಗದಗಿನ ತೋಂಟದಾರ್ಯ ಮಠದ ಡಾ: ಜಗದ್ಗುರು ತೋಂಟದಾರ್ಯ ಸ್ವಾಮಿಗಳ ಒಡನಾಟದ ಫಲವಾಗಿ ಮಲ್ಲಿಕಾರ್ಜುನ ಸಿದ್ದಣ್ಣವರ 'ಅನುಸಂಧಾನ' ಪುಸ್ತಕ ರಚನೆಗೆ ಪ್ರೇರಣೆ. ಸಾಮಾಜಿಕ ಕಳಕಳಿಯ ಪತ್ರಕರ್ತ ಹಾಗೂ ಸಮಾಜ ಶುದ್ಧಿ ಬಯಸುವ ಶ್ರೀಗಳು ಪರಸ್ಪರರಿಬ್ಬರ ಕರ್ತವ್ಯಗಳ ಅನುಸಂಧಾನವು ಆಗಿದೆ.
ಪತ್ರಿಕೆಗಳ ಮೂಲಕ ಸಾಮಾಜಿಕ ಸಮಸ್ಯೆಗೆ ಸ್ಪಂದಿಸುವ ಲೇಖಕರು ಹಾಗೂ ಅವುಗಳಿಗೆ ಸಾಧ್ಯವಾದಷ್ಟು ಪರಿಹಾರ ರೂಪವಾಗಿ ಶ್ರಮಿಸುವುದು ಶ್ರೀಗಳ ಸೇವೆ. ಇಂತಹ ಆಯ್ದ ವಿದ್ಯಮಾನಗಳ ಹಾಗೂ ಲೇಖನಗಳ ಸಂಗ್ರಹ -ಅನುಸಂಧಾನ. ಈ ಕೃತಿಯು 10 ಲೇಖನಗಳನ್ನು ಒಳಗೊಂಡಿದೆ. ಶರಣರ ಮಾನವೀಯತೆಯಡಿ (ಅಸ್ಪೃಶ್ಯತೆ, ಮೌಢ್ಯ-ಕಂದಾಚಾರಗಳ ವಿರೋಧಿ ಭಾವ ) ಶ್ರೀಗಳು ಸಾಮಾಜಿಕ ಸಮಸ್ಯೆಗಳಿಗೆ ಸ್ಪಂದಿಸಿದ ಲೇಖನಗಳು ಇಲ್ಲಿವೆ. ಪತ್ರಿಕಾ ಬರೆಹಗಳಾದರೂ ಸಂವೇದನಾಶೀಲವಾಗಿವೆ. ತೋಂಟದ ಸಿದ್ಧಲಿಂಗ ಶ್ರೀಗಳು ಈ ಕೃತಿಗೆ ಬೆನ್ನುಡಿ ಬರೆದು, ಮಾಧ್ಯಮದ ನಡೆಯು ಶರಣರ ಚಿಂತನೆಯನ್ನು ಅವಲಂಬಿಸಿರಬೇಕು ಎಂದೂ ಆಶಿಸಿದ್ದಾರೆ.
©2024 Book Brahma Private Limited.