ಲೇಖಕಿ ಪ್ರೊ. ಶೋಭಾದೇವಿ ಚೆಕ್ಕಿ ಅವರು ಮೂಲತಃ ಕಲಬುರಗಿಯವರು. ತಂದೆ: ಪ್ರೊ. ಬಸವಣ್ಣೆಪ್ಪ ಚೆಕ್ಕಿ, ತಾಯಿ ಪ್ರೊ. ಪಾರ್ವತಿ ಚೆಕ್ಕಿ.(ನಿವೃತ್ತ ದಂಪತಿ). ಪ್ರಾಥಮಿಕ ಶಿಕ್ಷಣದಿಂದ ಸ್ನಾತಕೋತ್ತರ ಪದವಿ (ಸಮಾಜಶಾಸ್ತ್ರ) ವರೆಗೂ ಕಲಬುರಗಿಯಲ್ಲೇ ಶಿಕ್ಷಣ. ತಿರುಪತಿಯ ಶ್ರೀ ವೆಂಕಟೇಶ್ವರ ವಿಶ್ವವಿದ್ಯಾಲಯದಿಂದ ಎಂ.ಫಿಲ್ ಪದವೀಧರರು. ಪ್ರಸ್ತುತ, ಸೇಡಂನ ನೃಪತುಂಗ ಪದವಿ ಮಹಾವಿದ್ಯಾಲಯದಲ್ಲಿ ಸಮಾಜಶಾಸ್ತ್ರ ವಿಭಾಗ ಮುಖ್ಯಸ್ಥೆ. ಸೇಡಂ ತಾಲೂಕು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು, ಶಾಂಭವಿ ಮಹಿಳಾ ಸಂಘದ ಅಧ್ಯಕ್ಷರು, ತಾಲೂಕು ಜಾನಪದ ಪರಿಷತ್ತು ಸೇಡಂನ ಸಮ್ಮೇಳನದ ಅಧ್ಯಕ್ಷರು, ರೋವರ್‍ಸ್ ಮತ್ತು ರೇಂಜರ್‍ಸ್ ಲೀಡರ್, ಇವರು ಸಮಾಜಶಾಸ್ತ್ರ ಕುರಿತು ಬರೆದ ಕೃತಿಗಳು ಗುಲಬರ್ಗಾ ವಿಶ್ವವಿದ್ಯಾಲಯ, ಬಳ್ಳಾರಿಯ ಶ್ರೀಕೃಷ್ಣದೇವರಾಯ ವಿ.ವಿ. ಹಾಗೂ ವಿಜಯಪುರದ ಮಹಿಳಾ ವಿಶ್ವವಿದ್ಯಾಲಯದ ಪದವಿ ವಿದ್ಯಾರ್ಥಿಗಳಿಗಾಗಿ ಪಠ್ಯ ಪುಸ್ತಕಗಳಾಗಿವೆ.
ಕೃತಿಗಳು: ಬೆಳ್ಳಕ್ಕಿ ಹಿಂಡು, ಚಿಂತನ-ಚಿರಂತನ, ಶರಣೆಯರ ಕಥಾ ಮಂಜರಿ, ನಗುತಾ ನಗುತಾ ಇರಬೇಕು. ಕೆಲವಂ ಬಲ್ಲವರಿಂದ ಕಲ್ತು, ಯಾನಾಗುಂದಿ ಮಾಣಿಕಮ್ಮ, ಬಸವ ದರ್ಶನ, ಬೆಳಕಿನ ಕಿರಣಗಳು, ಹೊಸ ಚಿಗುರು, ಆಧುನಿಕ ವಚನಗಳು, ಶರಣೆಂದೇ ಶಿವನಿಗೆ, ಬುದ್ಧದರ್ಶನ, ಶಾಂಭವಿ, ದಾರಿ ದೀವಿಗೆ, ವಚನಕಾರರು, ತಾಯಿ, ವಚನಕಾರ್ತಿಯರು, ಚಿಂತನ ಲಹರಿ, ದಿವ್ಯ ಭಾರತ, ಮಹಿಳಾ ಶೋಷಣೆ ಮತ್ತು ನಿವಾರಣೆ, ಮಕ್ಕಳ ಫಲವೆ ಬೇಡ್ಯಾಳೆ, ಮಾತೇ ಮುತ್ತು, ಫ್ರೆಂಡ್ಸ್ ಜೋಕ್ಸ್,, ಕ್ಲಿನಿಕ್ ಆಂಡ್ ಕೋರ್ಟ್ ಜೋಕ್ಸ್, ಜನರಲ್ ನಾಲೆಡ್ಜ್, ಪಾಪುಲರ್ ಜೋಕ್ಸ್, ಗಂಡ-ಹೆಂಡಿರ ಜೋಕ್ಸ್, ಫ್ಯಾಮಿಲಿ ಜೋಕ್ಸ್, ಬಗೆಬಗೆಯ ನಗೆ, ಗುರುಶಿಷ್ಯರ ಜೋಕ್ಸ್, ಸುಭಾಷಿತಗಳು, ನುಡಿಮುತ್ತುಗಳು, ರಸಪ್ರಶ್ನೆಗಳು, ಸಾವಿರದ ಗಾದೆಗಳು, ನಗೆಹನಿಗಳು, ಸುಮ್ಮನಿರುವೇಕೆ? ನಗೆಹನಿಗಳು.
ಪ್ರಶಸ್ತಿ-ಪುರಸ್ಕಾರಗಳು: ಶ್ರೀ ನೂರೊಂದೇಶ್ವರ ಪ್ರಶಸ್ತಿ, ಡಿವಿಜಿ ಪ್ರಶಸ್ತಿ, ಸಮಾಜ ಸೇವಾ ರತ್ನ ಪ್ರಶಸ್ತಿ, ಕರ್ನಾಟಕ ಶ್ರೀಗಂಧರತ್ನ ಪ್ರಶಸ್ತಿ, ಸೇಡಂ ತಾಲೂಕು ರಾಜ್ಯೋತ್ಸವ ಪ್ರಶಸ್ತಿ, ಕನ್ನಡ ನಾಡು ಶ್ರೇಷ್ಠ ಸಾಹಿತ್ಯ ಕೃತಿ ಪ್ರಶಸ್ತಿ, ವಚನ ಪಿತಾಮಹ ಡಾ. ಫ.ಗು. ಹಳಕಟ್ಟಿ ಸ್ಮಾರಕ ಪ್ರಶಸ್ತಿ, ಗೌರವ ಡಾಕ್ಟರೇಟ್, ಬಸವ ಸೇವಾ ಭೂಷಣ ಪ್ರಶಸ್ತಿ, ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಕೊಡಮಾಡುವ ಕೋವಿಡ್ -19 ವಾರಿಯರ್ಸ್ (ಕರ್ನಾಟಕ) ಪ್ರಮಾಣಪತ್ರ, ಅವ್ವ ಪ್ರಶಸ್ತಿ, ಅಪ್ಪ ಪ್ರಶಸ್ತಿ.