ಲೇಖಕ ಮಹಾಗಾಂವ್ ಕಳ್ಳಿಮಠದ ಶ್ರೀ ಗುರುಲಿಂಗ ಶಿವಾಚಾರ್ಯರು ಬರೆದ ಕೃತಿ-ಶೂನ್ಯದ ಒಡಲು. ಇದು ಅವರು ಬರೆದ ವಚನಗಳ ಸಂಕಲನ. ಒಟ್ಟು, 191 ವಚನಗಳಿವೆ. ವಿವಿಧ ಸಂದರ್ಭಗಳಲ್ಲಿ ಬರೆದ ಅನುಭವಗಳ ಮೊತ್ತವಾಗಿ ಈ ವಚನಗಳು ರೂಪುಗೊಂಡಿವೆ. ಯೋಗ -ಶಿವಯೋಗವೂ ವಚನಗಳ ಪ್ರಮುಖ ಅಂಶಗಳು. ಭಾವ ಮಾತಿನಲ್ಲಿ ಅಡಗಿದರೆ ಮಾತು ಮಂತ್ರಗಳಲ್ಲಿ ನೆಲೆಯಾಗಬೇಕು. ಮಂತ್ರವನ್ನು ದಾಟಿಸುವ ಸನ್ನಿಧಿಗೆ ಸೇರಲು ಅವುಗಳ ಗೊಡವೆ ಬೇಕಿಲ್ಲವೆಂದು ಸ್ಪವಚನಗಳ ಸ್ದಷ್ಟ ಸಂದೇಶವಾಗಿದೆ. ಇಂಥ ಅರಿವಿನ ಮೇಲೆ ನಿಂತ ವಚನ ಸಾಮ್ರಾಜ್ಯ ಗಟ್ಟಿಯಾಗಿರುತ್ತದೆ. 'ಅಹಂಭಾವ ತೊರೆದೊಮ್ಮೆ ಅನುಭವಿ ನೀನಾಗು ಅನುಭಾವ ದೊಡಗೂಡಿ ಸ್ವಾನುಭಾವಿಯ ಜೊತೆಗೂಡು ' ಎನ್ನುವ ಮಾತು ಶರಣಧರ್ಮವು ಸ್ಥಾಪಿಸಬೇಕಾದರೆ ಅಹo ಕಳೆಯಬೇಕು. ಅದು ತೊರೆಯದೆ ಅನುಭಾವ ಪ್ರಪಂಚ ತೆರೆದುಕೊಳ್ಳುವುದಿಲ್ಲ. ಅಂತದ್ದನ್ನು ನೀ ಅಪ್ಪಿದಾಗ ಗುರುವಿನ ಕೀಲಿ ನಿನ್ನದಾಗುವುದು. ಶ್ರದ್ಧೆ,ನಂಬಿಕೆ, ವಿಶ್ವಾಸವೇ ಗಟ್ಟಿಗೊಂಡು ಶಿವ, ಶಿವಯೋಗದ ಸಾಕ್ಷಾತ್ಕಾರವಾಗುವುದು ಅದನ್ನು ನಿನ್ನಿಷ್ಟದಂತೆ ಬದಲಿಸಲಾಗದು ಶಿವ ಸಾನಿಧ್ಯದ ಮೊದಲ ಮೆಟ್ಟಿಲು ನಿಷ್ಠೆಯೇ. ಎನ್ನುವುದನ್ನು ಅನೇಕ ವಚನಗಳ ಅನುಭವದ ತಳಪಾಯವಾಗಿದೆ.
©2024 Book Brahma Private Limited.