ಕವಿ ಹಾಗೂ ಲೇಖಕ ಸುಭಾಶ್ಚಂದ್ರ ಶೆಟ್ಟಿ, ಬಾಚನಾಳ ಅವರ ಕೃತಿ-ಶರಣರ ಸ್ಮರಣೆ. ಹೆಸರೇ ಸೂಚಿಸುವಂತೆ 12ನೇ ಶತಮಾನದ ವಚನಕಾರರ ಜೀವನ ಸಾಧನೆ ವಿವರಿಸಿದ ಕೃತಿ. ಸಾಮಾಜಿಕ, ರಾಜಕೀಯ,ಧಾರ್ಮಿಕ, ಆರ್ಥಿಕ ಹಾಗೂ ಒಳನೋಟಗಳಿಗೆ ಶರಣ ಚಳವಳಿ ನೀಡಿದಷ್ಟು ಪ್ರೇರಣೆ ಮಿಕ್ಕ ಕಾಲಘಟ್ಟಗಳಲ್ಲಿ ಸಿಗುವುದು ಕಡಿಮೆ. ಹೀಗಾಗಿ, ಶರಣರ ಚಳವಳಿ ಇಂದಿಗೂ ವಿದ್ವಾಂಸರ ಚರ್ಚೆ ಚಿಂತನೆಗಳಿಗೆ ಗ್ರಾಸವಾಗುತ್ತಿದೆ. ಕಾಲಗರ್ಭದಲ್ಲಿ ಹುದುಗಿರುವ ಸತ್ಯಸಂಗತಿಗಳು ಸಂಶೋಧನೆ ಚಿಂತನೆ ಹಾಗೂ ತಾರ್ಕಿಕ ಆಲೋಚನೆಗಳೊಂದಿಗೆ ಸ್ಪಷ್ಟವಾಗಬೇಕು. ಲೇಖಕರು ಶರಣರ ಜನ್ಮಸ್ಥಳ ಕುರಿತ ಒಳನೋಟಗಳನ್ನುಕಟ್ಟಿಕೊಡಲು ಯತ್ನಿಸಿದ್ದಾರೆ.
©2024 Book Brahma Private Limited.