ಶರಣ ಸಂಸ್ಕೃತಿ ಸಂವಾದ

Author : ಎಚ್.ಟಿ. ಪೋತೆ

Pages 96

₹ 50.00




Year of Publication: 2008
Published by: ಸ್ವಪ್ನ ಎಂಟರ್ ಪ್ರೈಸಸ್
Address: ನಂ. 57, 1ನೇ ಮಹಡಿ, ಪುಟ್ಟಣ್ಣ ರಸ್ತೆ, ಬಸವನಗುಡಿ, ಬೆಂಗಳೂರು- 560 004\n
Phone: 9036312786

Synopsys

‘ಶರಣ ಸಂಸ್ಕೃತಿ ಸಂವಾದ’ ಲೇಖಕ ಎಚ್‌. ಟಿ. ಪೋತೆ ಅವರ ಕೃತಿ. ಇಲ್ಲಿ ಬಸವಾದಿ ಶರಣರ ಕಾಯಕ ಸಂಸ್ಕೃತಿಯ ಸಾಮಾಜಿಕ - ಧಾರ್ಮಿಕ ಹಿನ್ನೆಲೆಯ ಹನ್ನೆರಡು ಲೇಖನಗಳು ಸಂಕಲನಗೊಂಡಿವೆ. ಆ ಕಾಲದ ಶೋಷಿತರು ಮತ್ತು ಕೆಳವರ್ಗದ ವಚನಕಾರರ ಸಾಮಾಜಿಕ, ಸಾಂಸ್ಕೃತಿಕ ಮಹತ್ವವನ್ನು ಅವರ ವಚನಗಳೊಂದಿಗೆ ಚರ್ಚಿಸಿ, ಕಾಯಕದ, ಜಂಗಮತ್ವದ ಹಿರಿಮೆಯನ್ನು ಇಲ್ಲಿನ ಲೇಖನಗಳು ವಿಶ್ಲೇಷಿಸುತ್ತವೆ.

About the Author

ಎಚ್.ಟಿ. ಪೋತೆ

ಕಥೆಗಾರ, ವಿಮರ್ಶಕ, ಅನುವಾದಕ, ಚಿಂತಕ, ಜಾನಪದ ವಿದ್ವಾಂಸ ಹಾಗೂ ಸಂಶೋಧಕರಾದ ಪ್ರೊ. ಎಚ್.ಟಿ.ಪೋತೆ ಬಿಸಿಲನಾಡಿನ ದಿಟ್ಟಪ್ರತಿಭೆ. ಬುದ್ದ. ಬಸವ, ಅಂಬೇಡ್ಕರ್, ಫುಲೆ, ಪೆರಿಯಾರ್, ಬಿ. ಶ್ಯಾಮಸುಂದರ್ ಚಿಂತನೆಗಳ ನೆಲೆಯಲ್ಲಿ ಸಾಹಿತ್ಯ ಕೃಷಿಗೈದವರು. ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಹಂಜಗಿ ಪೋತೆಯವರ ಜನ್ಮಸ್ಥಳ, ಗುಲ್ಬರ್ಗಾ ವಿವಿಯಿಂದ ಎಂ.ಎ, ಎಂ.ಫಿಲ್, ಪಿಎಚ್ಡಿ. ಅಂಬೇಡ್ಕರ್ ಕುರಿತಾದ ಕನ್ನಡದ ಮೊದಲ ಡಿ.ಲಿಟ್ ಪಡೆದ ಹೆಗ್ಗಳಿಕೆ. ಗುಲ್ಬರ್ಗಾ ವಿವಿಯ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಪ್ರಾಧ್ಯಾಪಕ, ಪ್ರಸಾರಂಗದ ನಿರ್ದೇಶಕ, ಅಂಬೇಡ್ಕರ್‌ ಅಧ್ಯಯನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ, ಕರ್ನಾಟಕ ವಿವಿ ಮೌಲ್ಯಮಾಪನ ಕುಲಸಚಿವರಾಗಿ ಅವರದ್ದು ಬಹುರೂಪಿ ಶೈಕ್ಷಣಿಕ ...

READ MORE

Excerpt / E-Books

ಪುಸ್ತಕ ಪರಿಚಯ: ಕೃಪೆ- ಹೊಸತು 

ಪ್ರಗತಿಪರ ಚಿಂತಕರಾದ ಪೋತೆಯವರು ಜಾನಪದ ಹಾಗೂ ದಲಿತ, ಬಂಡಾಯ ಕ್ಷೇತ್ರದಲ್ಲಿ ಸಾಹಿತ್ಯರಚನೆ ಮಾಡುತ್ತಿದ್ದಾರೆ. ಸಂಶೋಧನೆ, ವಿಚಾರ, ವಿಮರ್ಶೆ, ಅನುವಾದ ಮುಂತಾದ ಪ್ರಕಾರಗಳಲ್ಲಿ ತೊಡಗಿಕೊಂಡು ಕನ್ನಡ ಓದುಗರಿಗೆ ಅನೇಕ ಮೌಲಿಕ ಕೃತಿಗಳನ್ನು ನೀಡಿದ್ದಾರೆ. ಈ ಕೃತಿಯು ಬಸವಾದಿ ಶರಣರ ಕಾಯಕ ಸಂಸ್ಕೃತಿಯ ಸಾಮಾಜಿಕ-ಧಾರ್ಮಿಕ ಹಿನ್ನೆಲೆಯ ಹನ್ನೆರಡು ಲೇಖನ ಗಳನ್ನು ಒಳಗೊಂಡಿದೆ. ಶೋಷಿತರು ಮತ್ತು ಕೆಳವರ್ಗದವರಾದ ದಲಿತ ವಚನಕಾರರ ಸಾಮಾಜಿಕ, ಸಾಂಸ್ಕೃತಿಕ ಮಹತ್ತ್ವವನ್ನು ಅವರ ವಚನಗಳ ಸಾಹಿತ್ಯಕ ಮೌಲ್ಯದೊಂದಿಗೆ ಚರ್ಚಿಸಿ, ಕಾಯಕದ, ಜಂಗಮತ್ವದ ಹಿರಿಮೆಯನ್ನು ಲೇಖಕರು ಎತ್ತಿಹಿಡಿದಿದ್ದಾರೆ. 'ಬಸವಣ್ಣ ನಿರ್ಮಿಸಿದ ಸಮಾಜ', 'ಬುದ್ಧ-ಬಸವರ ಸಾಮಾಜಿಕ ಚಿಂತನೆ', 'ಜಾತಿಪದ್ಧತಿಯ ಕರಾಳ ಮುಖಗಳು', 'ಕೆಳವರ್ಗದ ವಚನಕಾರರು ಕಾಯಕ ಸಂಸ್ಕೃತಿ'

Related Books