ಸರಳೀಕರಣ ಇಷ್ಟಲಿಂಗ ಪೂಜಾ ವಿಧಾನ

Author : ಪಂಚಾಕ್ಷರಿ ಬಿ. ಪೂಜಾರಿ

Pages 104

₹ 80.00




Year of Publication: 2017
Published by: ಶ್ರೀ ದಂಡಗುಂಡ ಬಸವೇಶ್ವರ ದೇವಸ್ಥಾನ ಪೂಜಾರಿಗಳು
Address: ದಂಡಗುಂಡ, ತಾ: ಚಿತ್ತಾಪುರ, ಜಿಲ್ಲೆ: ಕಲಬುರಗಿ

Synopsys

ಲೇಖಕ ಪಂಚಾಕ್ಷರಿ ಬಿ. ಪೂಜಾರಿ ಅವರು ಇಷ್ಟಲಿಂಗ ಪೂಜಾ ವಿಧಾನಗಳ ಕುರಿತು ಸರಳೀಕರಣದ ಪಠ್ಯವಿರುವ ಕೃತಿ. ಭಾಲ್ಕಿಯ ಡಾ. ಬಸವಲಿಂಗ ಪಟ್ಟದ್ದೇವರು ಆಶಯ ನುಡಿಗಳನ್ನು ಬರೆದು ‘ಬಸವಾಕ್ಷರಷ್ಟಕಂ, ಗುರುಬಸವಷ್ಟೋತ್ತರ ನಾಮಾವಳಿ, ಪಾಹಿಮಾಂ ಶರಣು ಬಸವ, ಇಂತಹ ಬಸವ ಪರ ಗೀತೆಗಳನ್ನು ಓದುವಾಗ ಹೃದಯ ತುಂಬು ಬರುತ್ತವೆ. ಇಷ್ಟಲಿಂಗ ಶ್ರದ್ಧೆ ಗಟ್ಟಿಯಾಗುತ್ತದೆ. ಈ ಹಿನ್ನೆಲೆಯಲ್ಲಿ, ಲಿಂಗಾಯತರು ವೈದಿಕ ಮಂತ್ರಗಳಿಂದ ಹೊರಬಂದು ವಚನ ಸಾಹಿತ್ಯವನ್ನು ಅಪ್ಪಿಕೊಳ್ಳಬೇಕೆಂಬ ಆಶಯ ಇಲ್ಲಿಯ ನಾಮವಳಿಗಳ ರಚನೆಯಲ್ಲಿದೆ. ಸರಳ ಸಹಜ ಲಿಂಗಪೂಜೆ ಮಾಡಬೇಕು ಎಂಬ ಕಳಕಳಿಯ ಮನವಿಯೂ ಇದೆ. ವಚನ ಸಾಹಿತ್ಯದ ಆಳ ಅಧ್ಯಯನಕ್ಕೆ ಇಲ್ಲಿಯ ಪೂಜಾವಿಧಾನಗಳು ಕನ್ನಡಿ ಹಿಡಿಯುತ್ತವೆ’ ಎಂದು ಪ್ರಶಂಸಿಸಿದ್ದಾರೆ. 

ಕೃತಿಗೆ ಮುನ್ನುಡಿ ಬರೆದ ಸಾಹಿತಿ ಜಯಶ್ರೀ ದಂಡೆ ಅವರು ‘ಇಷ್ಟಲಿಂಗದ ಮಹತ್ವವನ್ನು ಸಾರುವ ತುಂಬಾ ಸರಳ ಹಾಗೂ ಸಹಜ ನಡೆಯನ್ನುಸಮರ್ಥಿಸಿಕೊಳ್ಳುವ ವಿನಮ್ರತೆ ಇದೆ. ಸಕಾರಾತ್ಮಕ ಭಾವನೆಗಳು ಜಾಗೃತವಾಗುವಂತಿವೆ. ಹಾಗೆ ಮಾಡುವುದು ಇಲ್ಲಿಯ ಕವನಗಳ ವಿಶೇಷ ಗುಣವಾಗಿದೆ. ಶೈಲಿ ಚೆನ್ನಾಗಿದೆ. ಕವಿತ್ವ ಶಕ್ತಿ ಇದೆ.’ ಎಂದು ಶ್ಲಾಘಿಸಿದ್ದಾರೆ. 

 

 

About the Author

ಪಂಚಾಕ್ಷರಿ ಬಿ. ಪೂಜಾರಿ
(10 August 1960)

ಕವಿ ಪಂಚಾಕ್ಷರಿ ಬಿ. ಪೂಜಾರಿ  ಅವರು ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ದಂಡಗುಂಡ ಗ್ರಾಮದವರು. ವೃತ್ತಿಯಿಂದ  ದಂಡಗುಂಡ ಬಸವಣ್ಣನ ದೇವಸ್ಥಾನದ ಅರ್ಚಕರು. ಬಿ.ಎ. ಪದವೀಧರರು. ತಂದೆ ಬಸವಣ್ಣೆಪ್ಪ ಪೂಜಾರಿ ತಾಯಿ ಮಹಾದೇವಮ್ಮ ಪೂಜಾರಿ. ದಂಡಗುಂಡ ಸರಕಾರಿ  ಪ್ರಾಥಮಿಕ ಶಾಲೆಯ ಅಭಿವೃದ್ಧಿ ಸಮಿತಿ (ಎಸ್.ಡಿ.ಎಂ.ಸಿ) ಅಧ್ಯಕ್ಷರು. ಕಸಾಪ ದಿಗ್ಗಾವಿ ವಲಯ ಅಧ್ಯಕ್ಷರು.  ಕೃತಿಗಳು: ಅಂತರಾಳದ ಪ್ರಭೆ (ವಚನಗಳ ಸಂಕಲನ), ಗುಡ್ಡದ ಗುಡುಗು (ತತ್ವಪದಗಳ ಸಂಕಲನ), ಮನದಾಳದ ಮಾತು (ನುಡಿಮುತ್ತುಗಳು), ತತ್ವಪದ ಸಂಪದ (ತತ್ವಪದಗಳ ಸಂಪಾದನಾ ಗ್ರಂಥ), ದಂಡಗುಂಡ ಬಸವಣ್ಣ ನಾಮಾವಳಿ,  ಸರಳೀಕರಣ ಇಷ್ಟಲಿಂಗ ಪೂಜಾ ವಿಧಾನ, ದಿಗ್ಗಾವಿ ದೀಪ (ಕವನ ಸಂಕಲನ)  ಪ್ರಶಸ್ತಿ-ಗೌರವಗಳು: ಚಿತ್ತಾಪುರ ತಾಲೂಕು ಕನ್ನಡ ...

READ MORE

Related Books