ಲಿಂಗವ ಪೂಜಿಸಿ ಫಲವೇನಯ್ಯ

Author : ರಂಜಾನ್ ದರ್ಗಾ

Pages 80

₹ 23.00




Year of Publication: 2007
Published by: ಲೋಹಿಯಾ ಪ್ರಕಾಶನ
Address: ಕಪ್ಪಗಲ್ಲು ರಸ್ತೆ, ಬಳ್ಳಾರಿ.

Synopsys

ಲೇಖಕ ರಂಜಾನ್ ದರ್ಗಾ ಅವರ ವೈಚಾರಿಕ ಕೃತಿ-ಲಿಂಗವ ಪೂಜಿಸಿ ಫಲವೇನಯ್ಯ. ಶರಣರ ನಡೆ-ನುಡಿ ಧಾರ್ಮಿಕವಾಗಿದ್ದರೂ ಅದಕ್ಕೆ ವೈಜ್ಞಾನಿಕ ತಳಹದಿ ಇದೆ. ದೇವರ ಅಸ್ತಿತ್ವದ ಸ್ವರೂಪ, ಅದರ ಸಮರ್ಥನೆಗಳು ಎಲ್ಲವೂ ವೈಜ್ಞಾನಿಕ. ಸೀಮಿತ ಜ್ಞಾನದ ಪರಿಧಿಯಲ್ಲಿರುವ ಮನುಷ್ಯನಿಗೆ ದೇವರು ನಿರಾಕಾರ ಎಂದರೆ ಅದನ್ನು ಜೀರ್ಣಿಸಿಕೊಳ್ಳಲು ಆಗದು. ಅದಕ್ಕೆ ಅವರಿಗೆ ಭೌತಿಕವಾದ ಇಲ್ಲವೇ ಸ್ಥಾವರವಾದ ವಸ್ತು ಬೇಕು. ಆ ಕಾರಣಕ್ಕೆ ಬಸವಣ್ಣನು ಲಿಂಗ ಧಾರಣೆ ಮಾಡಿಸಿದ. ಆದರೆ, ಲಿಂಗವೇ ದೇವರಲ್ಲ ಎಂಬುದು ಬಸವಣ್ಣನಿಗೆ ತಿಳಿದಿತ್ತು. ವ್ಯವಸ್ಥೇಯೊಂದನ್ನು ವಿರೋಧಿಸುವ ಯಾವುದೇ ಚಳವಳಿಯ ಸಂಘಟನೆಗಾಗಿ ಒಂದು ಸಂಕೇತ ಅಗತ್ಯ. ಆದ್ದರಿಂದ, ಬಸವಣ್ಣನವರು ಲಿಂಗವನ್ನು ನೀಡಿದ್ದರು. ಇದನ್ನು ಪೂಜಿಸುತ್ತಲೇ ಅಲೌಕಿಕವಾಗಿ ದೇವರನ್ನು ಗ್ರಹಿಸಬೇಕು ಎಂದು ಹೇಳುತ್ತಾ ಅವರು ಲಿಂಗವ ಪೂಜಿಸಿದರೆ ಫಲವೇನು? ಎಂಬಂತಹ ಕ್ರಾಂತಿಕಾರಿ ಹಾಗೂ ದೇವರನ್ನು ಕಾಣುವ ಅಂತಿಮ ಸತ್ಯವನ್ನು ಮನದಟ್ಟು ಮಾಡಿಸಲು ಯತ್ನಿಸಿದ್ದರು. ಇಂತಹ ವಿಷಯ ವಸ್ತುವಿನ ಕೃತಿ ಇದು.

About the Author

ರಂಜಾನ್ ದರ್ಗಾ

ಲೇಖಕ ರಂಜಾನ್ ದರ್ಗಾ ಅವರು ಮೂಲತಃ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಬಸನಾಳ ಗ್ರಾಮದವರು. ಕನ್ನಡ ಸಾಹಿತ್ಯ ಲೋಕದಲ್ಲಿ ತಮ್ಮದೇ ಛಾಪು ಮೂಡಿಸಿರುವ ಅವರ ಪ್ರಗತೀಪರ ಲೇಖಕರಾಗಿ ಗುರುತಿಸಿಕೊಂಡಿದ್ದಾರೆ. ಕಾವ್ಯ ಬಂತು ಬೀದಿಗೆ, ಹೊಕ್ಕುಳಲ್ಲಿ ಹೂವಿದೆ, ಬಸವಣ್ಣನವರ ದೇವರು, ಬಸವ ಧರ್ಮದ ವಿಶ್ವ ಸಂದೇಶ, ನಡೆ ನುಡಿ ಸಿದ್ದಾಂತ, ವಚನ ವಿವೇಕ ಸೇರಿದಂತೆ ಹಲವಾರು ಕೃತಿಗಳನ್ನ ರಚಿಸಿದ್ದಾರೆ. ಸಾಹಿತ್ಯ ಕ್ಷೇತ್ರದ ಸೇವೆಗಾಗಿ ರಾಜ್ಯೋತ್ಸವ ಪ್ರಶಸ್ತಿ, ವಚನ ಚಿಂತಕ ಪ್ರಶಸ್ತಿ, ಸಾಹಿತ್ಯ ಶ್ರೀ ಪ್ರಶಸ್ತಿ ಸೇರಿದಂತೆ ಹಲವು ಗೌರವ ಪ್ರಶಸ್ತಿಗಳು ರಂಜಾನ್ ದರ್ಗಾ ಅವರಿಗೆ ಸಂದಿವೆ.  ಪ್ರಶಸ್ತಿಗಳು: 2022ನೇ ಸಾಲಿನ ಕರ್ನಾಟಕ ...

READ MORE

Related Books