ಡಾ. ಮೃತ್ಯುಂಜಯ ರುಮಾಲೆ ಅವರ ‘ಇಷ್ಟಲಿಂಗ ವಿವಿಧ ಆಯಾಮಗಳು’ ಕೃತಿಯು ಸಂಪಾದಿತ ಲೇಖನಗಳ ಸಂಕಲನವಾಗಿದೆ. ಕೃತಿಯು ಮೂರು ಭಾಗಗಳನ್ನು ಒಳಗೊಂಡಿದೆ. ಭಾಗ 1 : ವಚನೋಕ್ತಿ ಇಷ್ಟಲಿಂಗಾನುಸಂಧಾನ (ಮೃತ್ಯುಂಜಯ ರುಮಾಲೆ), ಇಷ್ಟಲಿಂಗ : ಸಾಮಾಜಿಕ ಆಯಾಮ (ಪ್ರಕಾಶ ಗಿರಿಮಲ್ಲನವರ), ಇಷ್ಟಲಿಂಗ : ಆಧ್ಯಾತ್ಮಿಕ ಆಯಾಮ (ಪ್ರೊ.ಜಿ.ಬಿ.ಹಳ್ಯಾಳ, ಇಷ್ಟಲಿಂಗ : ಸಾಂಸ್ಕೃತಿಕ ಆಯಾಮ (ಜೆ.ಎಂ.ನಾಗಯ್ಯ) ಇಷ್ಟಲಿಂಗ : ವೈಜ್ಞಾನಿಕ ಆಯಾಮ (ಅವಿನಾಶ ಕವಿ) ಭಾಗ-2 : ಸಂಸ್ಕಾರಗಳು : ಜ್ಞಾನದೀಕ್ಷೆ ಮತ್ತು ಇಷ್ಟಲಿಂಗಧಾರಣ (ಡಾವಿಲ್ಯಂ ಮಾಡ್ತ), ಇಷ್ಟಲಿಂಗದ ಅವಶ್ಯಕತೆಯ ಪ್ರಸ್ತಾವನೆ (ಜಿ.ಆರ್.ಭಸ್ಮಾಂಗ ದೇವರು) ಪ್ರಾಣ ಲಿಂಗಾರ್ಚನೆ (ಮಧುರ ಚೆನ್ನ), ಇಷ್ಟಲಿಂಗೋಪಾಸನಾಕ್ರಮ (ವೈ.ನಾಗೇಶ ಶಾಸ್ತ್ರ), ಇಷ್ಟಲಿಂಗೋಪಾಸನೆಯಲ್ಲಿ ಆತ್ಮವಿಕಾಸ : ಶ್ರೀ ಜ.ಚ.ನಿ., ಇಷ್ಟಲಿಂಗ ರಹಸ್ಯ (ಕುಮಾರಸ್ವಾಮಿಗಳು, ತಪೋವನ), ಶರಣರ ಅಷ್ಟಾವರಣ ನಿಷ್ಠೆ (ಕುಮಾರಸ್ವಾಮಿಗಳು, ತಪೋವನ), ಬಸವಣ್ಣನವರ ವಚನದಲ್ಲಿ ಬ್ರಹ್ಮಾಂಡ ಹಾಗೂ ದೇವರ ಸಂಕೇತವಾಗಿರುವ ಕರಸ್ಥಳದಲ್ಲಿರುವ ಇಷ್ಟಲಿಂಗ (ಸಿ.ವಿ.ಪ್ರಭುಸ್ವಾಮಿಮಠ), ಲಿಂಗಾಂಗ ಸಾಮರಸ್ಯ : ಶ್ (ಮಹಾದೇವ ಸ್ವಾಮಿಗಳು ಸರ್ಪಭೂಷಣಮಠ), ಶಿವಯೋಗ ( ಸದಾಶಿವ ಮಹಾಸ್ವಾಮಿಗಳು, ಹಾನಗಲ್ಲು), ಶಿವಯೋಗ (ಪುಟ್ಟರಾಜ ಗವಾಯಿಗಳು), ಶಿವಯೋಗ (ಅನಾಮಧೇಯ ಹಸ್ತಪ್ರತಿಗಳಿಂದ) ಇಷ್ಟಲಿಂಗ (ಎಂ.ಎಂ.ಕಲಬುರ್ಗಿ), ಇಷ್ಟಲಿಂಗ (ಬಸವ ಮರುಳಸಿದ್ದ), ಲಿಂಗಪೂಜೆಯ ಬೆಳವಣಿಗೆಯ ಇತಿಹಾಸ ( ಹರ್ಡೆಕರ ಮಂಜಪ್ಪ ಸ್ವಾಮೀಜಿ, ಶಿವಮೊಗ್ಗ) ಭಾಗ-3 : ಲಿಂಗ ಮತ್ತು ಇಷ್ಟಲಿಂಗಗಳ ಪರಿಕಲ್ಪನೆ (ಬಿ.ವಿ.ಮಲ್ಲಾಪುರ), ಇಷ್ಟಲಿಂಗ ದೀಕ್ಷೆ (ಷಣ್ಮುಖಯ್ಯ ಸ್ವಾಮಿ ಅಕ್ಕೂರಮಠ), ಇಷ್ಟಲಿಂಗ ಪೂಜಾವಿಧಾನ (ಸಿದ್ಧರಾಮ ಸ್ವಾಮಿಗಳು) ಇಷ್ಟಲಿಂಗದ ಅನುಸಂಧಾನ (ಅನ್ನದಾನೀಶ್ವರ ಮಹಾಸ್ವಾಮಿಗಳು), ಇಷ್ಟಲಿಂಗ-ಧಾರ್ಮಿಕ ಮತ್ತು ಆಧ್ಯಾತ್ಮಿಕ ಮಹತ್ವ (ಶಿವಕುಮಾರ ಮಹಾಸ್ವಾಮಿಗಳು), ಇಷ್ಟಲಿಂಗ : ಯೋಗವಿಚಾರ( ಯೋಗೀಶ ಯಡ್ರಾವಿ) ಈ ಬರಹಗಳನ್ನು ಒಳಗೊಂಡಿದೆ.
ಕೃತಿಯ ಬೆನ್ನುಡಿಯಲ್ಲಿನ ಸಾಲುಗಳು ಹೀಗಿವೆ; ಇಷ್ಟಲಿಂಗವನ್ನು ಆಯತ ಮಾಡಿಕೊಳ್ಳುವ, ಸ್ವಾಯತಗೊಳಿಸಿಕೊಳ್ಳುವ ಮತ್ತು ಸನ್ನಿಹಿತವಾಗುವ ಕ್ರಿಯೆಯು ಸಮಷ್ಟಿಯಲ್ಲಿರುವ ಚೈತನ್ಯವನ್ನು ದೃಷ್ಟಿಯಲ್ಲಿ ಶೋಧಿಸಿ , ಆತ್ಮಶುದ್ದಿ ಮಾಡಿಕೊಳ್ಳುವ ಅನುಭಾವಿಕ ಆಚರಣೆಯಾಗಿದೆ. ದೈಹಿಕದ ಜೊತೆಗೆ ಪಾರಾಮಾರ್ಥಿಕ, ಆಧ್ಯಾತ್ಮಿಕ, ವೈಜ್ಞಾನಿಕ, ಸಾಂಸ್ಕೃತಿಕ ಮತ್ತು ಮುಖ್ಯವಾಗಿ ಸಾಮಾಜಿಕತೆ ಒಳಗೊಂಡಂತೆ ಅಂತರಂಗ-ಬಹಿರಂಗದ ನೆಲೆಯೂ ಸ್ವಾಸ್ಥ್ಯಗೊಂಡು ಸಮಗ್ರತೆಯ ಪ್ರಜ್ಞಾಪೂರ್ವಕ ಘಟಕವಾಗಲು ಪ್ರೇರೇಪಿಸುವ ವಿಶಿಷ್ಟ ಆಚರಣೆಯಾಗಿದೆ. ಬ್ರಹ್ಮಾಂಡವನ್ನೇ ವ್ಯಾಪಿಸಿದ ಆತ್ಮಂತಿಕ ಶಕ್ತಿ-ಚೈತನ್ಯವು ಕರಸ್ಥಲದಲ್ಲಿ ನೆಲೆಗೊಳ್ಳುತ್ತದೆ ಎಂಬ ನಂಬಿಕೆಯು ಸಮಷ್ಟಿ -ದೃಷ್ಟಿಯನ್ನು ಏಕೀಭಾವದಲ್ಲಿ ಖಚಿತಗೊಳಿಸುತ್ತದೆ.
©2024 Book Brahma Private Limited.