ಇತ್ತೀಚಿನ ದಿನಗಳಲ್ಲಿ ಆಪ್ತ ಸಮಾಲೋಚನೆ ಚಿಕಿತ್ಸಾ ರೂಪವಾಗಿ ಮಾತ್ರವಲ್ಲದೇ ಸಾಂತ್ವಾನವಾಗಿಯೂ ಬೆಳವಣಿಗೆ ಹೊಂದುತ್ತಿರುವುದು ಎಲ್ಲೆಡೆ ಕಂಡುಬರುತ್ತದೆ. ಹಲವಾರು ಜನರು ಇದರ ಉಪಯೋಗ ಪಡೆದುಕೊಳ್ಳುತ್ತಿದ್ದಾರೆ. ಒತ್ತಡಗಳ ಜೊತೆಗೆ ಇನ್ನಿತರ ವೈಯಕ್ತಿಕ ಕಾರಣಗಳಿಂದಾಗಿ ಏನು ಮಾಡಬೇಕೆಂಬುದನ್ನು ಸ್ವತಃ ನಿರ್ಧಾರ ಕೈಗೊಳ್ಳಲಾಗದೆ ಚಡಪಡಿಸಿ ಗೊಂದಲಕ್ಕೆ ಸಿಲುಕುತ್ತಾರೆ. ಒಂದು ಸಮಾಧಾನದ ಮಾತು ಹಾಗೂ ಸ್ಪಷ್ಟ ನಡೆಯ ಬಗ್ಗೆ ಅವರಿಗೆ ಮಾರ್ಗದರ್ಶನದ ಅವಶ್ಯಕತೆ ಇರುತ್ತದೆ. ಅಂತಹ ಸಹಾನುಭೂತಿಯುಳ್ಳ ಸಲಹೆಯ ಒಂದು ಚಿಕಿತ್ಸಾಕ್ರಮವನ್ನು ಈ ಕೃತಿಯಲ್ಲಿ ಲೇಖಕರು ವಿವರವಾಗಿ ತಿಳಿಸಿದ್ದಾರೆ. ತರಬೇತಿಗೊಂಡ ಆಪ್ತ ಸಮಾಲೋಚಕರು ಸಹಾಯಾರ್ಥಿಯೊಡನೆ ಯಾವ ರೀತಿ ಹಂತಹಂತವಾಗಿ ಆತನ ಸಮಸ್ಯೆಯನ್ನು ಗುರುತಿಸಿ, ಚಿಕಿತ್ಸೆ ನೀಡಿ ಆತನನ್ನು ಹರ್ಷಚಿತ್ತನನ್ನಾಗಿ ಮಾಡುವರೆಂದು ಇಲ್ಲಿ ಓದಿ ತಿಳಿದುಕೊಳ್ಳಿ.
ಈ ಕೃತಿಗೆ ಕ.ಸಾ.ಪ ಕೊಡಮಾಡುವ 2019ನೇ ಸಾಲಿನ ದಿ|| ಡಾ. ಎ. ಎಸ್. ಧರಣೇಂದ್ರಯ್ಯ - ಮನೋವಿಜ್ಞಾನ ದತ್ತಿ ಪ್ರಶಸ್ತಿ ದೊರೆತಿದೆ.
©2024 Book Brahma Private Limited.