ಮನೋವೈದ್ಯ ಡಾ. ಸಿ.ಆರ್. ಚಂದ್ರಶೇಖರ ಅವರ ಕೃತಿ-ಅರ್ಥಪೂರ್ಣ ಬದುಕು ಸುಖ ಸಂತೋಷ ಬೇಕೆ? ದುಃಖ ದುಮ್ಮಾನ ಬೇಡವೇ?. ಮನುಷ್ಯನ ಮೂಲ ಗುಣ ಎಂದರೆ ಆತ ಸುಖವನ್ನೇ ಬಯಸುತ್ತಾನೆ. ದುಃಖವನ್ನು ಎಂದಿಗೂ ಇಚ್ಛೆ ಪಡಲಾರ. ಆದರೆ, ಸುಖ-ದುಃಖವನ್ನು ಹೇಗೆ ಸ್ವೀಕರಿಸಬೇಕು ಎಂಬುದೂ ಸಹ ಒಂದು ಕಲೆ ಹಾಗೂ ವಿಜ್ಞಾನ. ಆಗಲೇ ಆರ್ಥಪೂರ್ಣ ಬದುಕಾಗಲು ಸಾಧ್ಯ. ಇಲ್ಲದಿರೆ, ಅದು ಕೊನೆಯ ಸಮಯದಲ್ಲಿ ದುರಂತವನ್ನೇ ತಂದೊಡ್ಡುತ್ತದೆ. ಏಕೆಂದರೆ, ಸುಖ-ದುಃಖಗಳು ನಮ್ಮ ಜೊತೆ ಬಹು ಕಾಲ ಇರಲಾರವು. ಇಂತಹ ವಿಚಾರಗಳ ಕುರಿತು ಮನೋವೈಜ್ಞಾನಿಕವಾಗಿ ನೀಡಿದ ಮಾಹಿತಿಯ ಕೃತಿ ಇದು.
©2024 Book Brahma Private Limited.