ಲೇಖಕ ಕಿರಣ್ ಎ.ಎಸ್. ಅವರ ಕೃತಿ ʻಸೆರೆಂಡಿಟಿ: ವೈದ್ಯಲೋಕದ ಅದ್ಭುತ ಆಕಸ್ಮಿಕಗಳುʼ. ವೈದ್ಯಕೀಯ ಕ್ಷೇತ್ರದಲ್ಲಿ ನಡೆದ ಕೆಲವು ಅನ್ವೇಷಣೆಗಳ ಸಮಗ್ರ ಚಿತ್ರಣಗಳನ್ನು ನೀಡುವ ಪುಸ್ತಕ. ಐವತ್ತು ಅಧ್ಯಾಯಗಳಿದ್ದು, ಒಂದೊಂದು ಅಧ್ಯಾಯವೂ ವೈದ್ಯಕೀಯ ಮತ್ತು ಜೈವಿಕ ರಸಾಯನಶಾಸ್ತ್ರದ ಮಹತ್ವದ ಅನ್ವೇಷಣೆಯ ಮಾಹಿತಿಗಷ್ಟೇ ಸೀಮಿತವಾಗಿರದೆ, ಅದರ ಹಿಂದಿರುವ ಅನ್ವೇಷಕರ ವ್ಯಕ್ತಿತ್ವ, ಅವರು ಎದುರಿಸಿದ ಕ್ಲಿಷ್ಟ ಪರಿಸ್ಥಿತಿ, ವೈಫಲ್ಯ, ಹತಾಶೆ ಕೊನೆಗೆ ಅವೆಲ್ಲವನ್ನೂ ಸಮರ್ಥವಾಗಿ ಮೀರಿದ ಯಶೋಗಾಥೆಯನ್ನು ಹೇಳುತ್ತದೆ. ಬುಡಕಟ್ಟು ಜನರು ಬಳಸುತ್ತಿದ್ದ ಮೂಲಿಕೆ ಜಗತ್ತಿಗೆ ಮದ್ದಾದದ್ದು, ಹಾಲಾಹಲದಲ್ಲೂ ಔಷಧೀಯ ಬಳಕೆ ಕಂಡುಕೊಂಡ ಬಗೆ, ಐತಿಹಾಸಿಕ ಕಾಲಘಟ್ಟದಲ್ಲೇ ಕಂಡುಕೊಂಡಿದ್ದ ಗರ್ಭಧಾರಣೆಯ ಪರೀಕ್ಷೆ ಮತ್ತು ಕಣ್ಣಿನ ಪೊರೆಯ ಚಿಕಿತ್ಸೆ, ಕೃತಕ ಅಂಗರಚನೆಗೆ ಪ್ರೇರಕವಾದ ನಿಸರ್ಗ, ಮದ್ದನ್ನು ಕಂಡು ಹಿಡಿದು ತಮ್ಮ ಮೇಲೇ ಪ್ರಯೋಗಿಸಿಕೊಂಡು ಸಾಬೀತು ಪಡಿಸುವ ಅನ್ವೇಷಕರು, ಮಲೇರಿಯಾ ಕಾಲರಾ ಕ್ಷಯದಂತ ಮನುಕುಲದ ವೈರಿಯನ್ನು ಮಣಿಸಿದ್ದು, ಪೆನ್ಸಿಲಿನ್ ಮೂಲ ಅನ್ವೇಷಕರು ಎಲೆಮರೆಯ ಕಾಯಿಯಾಗಿದ್ದು ಹೀಗೆ ವೈದ್ಯಲೋಕದ ಕೆಲವು ರಹಸ್ಯಗಳನ್ನು ಈ ಕೃತಿಯಲ್ಲಿ ಲೇಖಕರು ಅನಾವರಣಗೊಳಿಸಿದ್ದಾರೆ.
©2024 Book Brahma Private Limited.