ನಿಮ್ಮ ಬುದ್ದಿವಂತಿಕೆ ನೆನಪಿನ ಶಕ್ತಿ ಹೆಚ್ಚಲಿ- ಮನೋವೈದ್ಯ ಡಾ. ಸಿ.ಆರ್. ಚಂದ್ರಶೇಖರ ಅವರ ಕೃತಿ. ಬುದ್ದಿವಂತಿಕೆಯು ವ್ಯಕ್ತಿ-ವ್ಯಕ್ತಿಗೆ ಭಿನ್ನವಾದದ್ದು. ಅನುವಂಶಿಯತೆ ಹಾಗೂ ಪರಿಸರದ ಮೇಲೂ ಬುದ್ದಿವಂತಿಕೆ ಅವಲಂಬಿತವಾಗಿರುತ್ತದೆ ಎಂಬ ಬಗ್ಗೆ ಬಹುತೇಕ ಅಧ್ಯಯನಗಳ ದೃಢಪಡಿಸಿವೆ. ಈ ಎರಡು ಅಂಶಗಳ ಪೈಕಿ ಯಾವುದು ಬುದ್ದಿವಂತಿಕೆಯನ್ನು ನಿರ್ಧರಿಸುತ್ತದೆ ಅಥವಾ ಮೂಲ ಕಾರಣ ಎಂದು ಹೇಳುವುದು ಕಷ್ಟ. ಆದರೂ, ಬುದ್ದಿವಂತಿಕೆ ಹೆಚ್ಚಿಸುವ ಮೂಲಕ ನೆನಪಿನ ಶಕ್ತಿಯನ್ನೂ ಹೆಚ್ಚಿಸಿಕೊಳ್ಳಬಹುದು ಎಂಬ ಬಗ್ಗೆ ಮನೋವೈಜ್ಞಾನಿಕವಾಗಿ ಚರ್ಚಿಸಿದ ಮಾಹಿತಿಗಳು ಈ ಕೃತಿಯಲ್ಲಿವೆ.
©2024 Book Brahma Private Limited.