ಲೇಖಕಿ ಶಾಂತಾ ನಾಗರಾಜ್ ಅವರ ಕೃತಿ-ನೀವೂ ಯಶಸ್ವಿ ಗೃಹಿಣಿಯೇ? ವ್ಯಕ್ತಿತ್ವ ವಿಕಸನ ಮಾಲೆಯಡಿ ಈ ಕೃತಿ ಪ್ರಕಟಗೊಂಡಿದೆ. ಮನೆಯ ಏಳ್ಗೆಯಲ್ಲಿ ಮಹಿಳೆಯ ಪಾತ್ರ ದೊಡ್ಡದು. ಮಹಿಳೆ ಮನಸ್ಸು ಮಾಡದಿದ್ದರೆ ಮನೆಯ ಅಭಿವೃದ್ಧಿ ಅಸಾಧ್ಯ. ಬದುಕಿನ ಏರಿಳಿತಗಳಿಗೆ ಹೊಂದಿಕೊಂಡು, ಅತ್ಯಂತ ಸೂಕ್ಷ್ಮ ಕೌಟುಂಬಿಕ ಸಮಸ್ಯೆಗಳನ್ನು ಯಶಸ್ವಿಯಾಗಿ ನಿಭಾಸಬಲ್ಲ ಚಾಕಚಕ್ಯತೆ ಗೃಹಿಣಿಗಿರಬೇಕು. ಕುಟುಂಬದ ಸದಸ್ಯರ ನಡುವೆ ಪ್ರೀತಿ, ಸಹಕಾರವಿರಬೇಕು. ಯಾವುದು ಸರಿ ಯಾವುದು ತಪ್ಪು ಎನ್ನುವ ವಿವೇಚನೆ ಇರಬೇಕು. ಗಂಡ-ಮಕ್ಕಳು-ಬಳಗ ಇತ್ಯಾದಿ ಹೊಣೆಗಾರಿಕೆಗಳು, ಉದ್ಯೋಗಸ್ಥ ಮಹಿಳೆಯಾಗಿದ್ದರೆ ಕಚೇರಿಯ ಕೆಲಸದ ಒತ್ತಡಗಳು ಇವೆಲ್ಲವನ್ನೂ ನಿಭಾಸುವ ಜಾಣ್ಮೆ ಗೃಹಿಣಿಗೆ ಇರಬೇಕು. ಇಂತಹ ಗುಣದೊಂದಿಗೆ ಇರುವ ಹೆಣ್ಣಿನ ಮನೆಯು ಪ್ರಗತಿಶೀಲವಾಗಿರುತ್ತದೆ. ಇಂತಹ ಸಂಗತಿಗಳನ್ನು ಒಳಗೊಂಡ ಕೃತಿ ಇದು. ಮನೋತಜ್ಞ ಡಾ. ಸಿ.ಆರ್. ಚಂದ್ರಶೇಖರ ಅವರು ಕೃತಿಯ ಸಂಪಾದಕರು.
©2024 Book Brahma Private Limited.