ಮಕ್ಕಳ ಮನಸ್ಸು ಸದಾ ಚಟುವಟಿಕೆಯುಳ್ಳದ್ದು. ಕ್ರಿಯಾಶೀಲತೆ ಬಯಸುತ್ತದೆ. ಕುತೂಹಲದಿಂದ ನೋಡುವ, ಕೇಳುವ, ಹೇಗೆ, ಏಕೆ ಎಂದು ಪ್ರಶ್ನೆಮಾಡುವ ಮನಸ್ಸುಗಳನ್ನು ಮತ್ತಷ್ಟು ಕ್ರಿಯಾತ್ಮಕವಾದ ಚಟುವಟಿಕೆಗಳಲ್ಲಿ ಹೇಗೆ ತೊಡಗಿಸಬೇಕು. ಪ್ರೊತ್ಸಾಹಿಸಬೇಕು ಎಂಬುದರ ಕುರಿತು ಲೇಖಕ ಕಿಕ್ಕೇರಿ ವೀರ ನಾರಾಯಣ ಅವರು ಇಲ್ಲಿ ಚರ್ಚಿಸಿದ್ದಾರೆ. ಮಕ್ಕಳಿಗೆ ಮಾರ್ಗದರ್ಶನ ಮಾಡುವಲ್ಲಿ ಪೋಷಕರಿಗೂ, ಶಿಕ್ಷಕರಿಗೂ ಈ ಕೃತಿ ಒಂದು ಉತ್ತಮ ಕೈಪಿಡಿಯಾಗಬಲ್ಲದು.
ಲೇಖಕ ಕಿಕ್ಕೇರಿ ವೀರನಾರಾಯಣ ಅವರು ಹುಟ್ಟಿದ್ದು 1954 ಜುಲೈ 16ರಂದು ಮಂಡ್ಯ ಜಿಲ್ಲೆ ಕೆ.ಆರ್. ಪೇಟೆ ತಾಲೋಕಿನ ಕಿಕ್ಕೇರಿಯಲ್ಲಿ. ಮಕ್ಕಳ ವ್ಯಕ್ತಿತ್ವ ವಿಕಸನದ ಮಹತ್ವ ತಿಳಿಸಲು ಇದಕ್ಕೆ ಸಂಬಂಧಿಸಿದಂತೆ ಕೃತಿಗಳನ್ನು ರಚಿಸಿದ್ದಾರೆ ಮಕ್ಕಳಲ್ಲಿ ಸೃಜನಶೀಲತೆಯನ್ನು ವೃದ್ಧಿಸುವುದು ಹೇಗೆ?, ಆಟವೇ ಪಾಠವಾಗುವುದು ಹೇಗೆ ?’ ಕೃತಿಗಳನ್ನು ರಚಿಸಿದ್ದಾರೆ ...
READ MORE