ಮನೋವೈದ್ಯ ಡಾ. ಸಿ.ಆರ್. ಚಂದ್ರಶೇಖರ ಅವರ ಕೃತಿ-ಮಾನಸ ಲೋಕ. ಮನಸ್ಸು ಚಂಚಲ. ಅದನ್ನು ನೋಡಲಾಗದು. ಆದರೆ, ಅದರ ವಿಚಾರಗಳನ್ನು ತಿಳಿಯಬಹುದು. ಹೀಗೆ ವಿಚಾರಿಸಲೂ ಮನಸ್ಸು ಕಾರಣ. ಅದು ನಾವು ಬೆಳೆದು ಬಂದ ಪರಿಸರ, ತೆಗೆದುಕೊಂಡ ಶಿಕ್ಷಣ ಎಲ್ಲವೂ ಕಾರಣವಾಗಿರುತ್ತದೆ. ಮನಸ್ಸು ರೂಪುಗೊಳ್ಳುವುದು ಅನುವಂಶೀಯತೆ ಮೇಲೂ ಹಾಗೂ ಪರಿಸರದ ಮೇಲೂ ಅವಲಂಬಿತವಾಗಿರುತ್ತದೆ. ಕೆಲವೊಂದು ಸಲ, ಈ ಎರಡರ ಫಲವೂ ಆಗಿರುತ್ತದೆ. ಮನಸ್ಸು, ಮನಸ್ಸಿನ ಚಟುವಟಿಕೆಗಳು, ಅದರ ನಿಯಂತ್ರಣ ಹೇಗೆ? ಇತ್ಯಾದಿ ಅಂಶಗಳ ಕುರಿತು ಮನೋವೈದ್ಯರಾದ ಲೇಖಕರು ಇಲ್ಲಿ ವಿವರಿಸಿದ್ದಾರೆ.
©2024 Book Brahma Private Limited.