ಮನೋವೈದ್ಯ ಡಾ. ಸಿ.ಆರ್. ಚಂದ್ರಶೇಖರ ಅವರು ಬರೆದ ಕೃತಿ-ವಿದ್ಯಾರ್ಥಿ ರ್‍ಯಾಂಕ್ ಗಳಿಸಬೇಕೇ? ಜ್ಞಾನ ಸಂಪಾದಿಸಬೇಕೇ?. ವಿದ್ಯಾರ್ಥಿಯ ಶೈಕ್ಷಣಿಕ ಪ್ರಗತಿಯನ್ನು ಅವರು ಪಡೆಯುವ ಅಂಕಗಳಿಂದ ನಿರ್ಧರಿಸುತ್ತಿದ್ದೇವೆ. ಆದರೆ, ಪ್ರಕ್ರಿಯೆ ವಿದ್ಯಾರ್ಥಿಯ ಪ್ರತಿಭೆಯನ್ನು ತಿಳಿಯಲು ಅವಕಾಶವೇ ನೀಡದು. ಆತನಿಗೆ ಯಾವ ವಿಷಯದಲ್ಲಿ ಆಸಕ್ತಿ ಇದೆ ಎಂಬುದನ್ನು ತಿಳಿಯಲು ಪಾಲಕರು ವಿಫಲರಾಗುತ್ತಾರೆ. ಕಡಿಮೆ ಅಂಕ ಗಳಿಸಿದರೆ ವಿದ್ಯಾರ್ಥಿ ದಡ್ಡ ಎಂಬ ನಿಧಾರ ಸರಿಯಲ್ಲ. ಬುದ್ದಿವಂತಿಕೆಯಲ್ಲಿ ಪ್ರತಿಯೊಂದು ಮಗುವು ತನ್ನ ವಿಭಿನ್ನತೆಯಿಂದ ಪ್ರತ್ಯೇಕವಾಗಿ, ವಿಶಿಷ್ಟವಾಗಿ ಗುಣಧರ್ಮಗಳನ್ನು ಹೊಂದಿರುತ್ತದೆ. ಪಾಲಕರು ಈ ವಿಭಿನ್ನತೆಯನ್ನು ಪರಿಗಣಿಸಬೇಕು. ಜ್ಞಾನಾರ್ಜನೆಗಾಗಿ ಮಾತ್ರ ಶಿಕ್ಷಣವಿದೆ. ಕೇವಲ ಅಂಕ ಗಳಿಸಲು ಅಲ್ಲ. ವಿದ್ಯಾರ್ಥಿಗಳ ಆಸಕ್ತಿ-ಪ್ರತಿಭೆ ಆಧರಿಸಿ ಅವರಿಗೆ ಶಿಕ್ಷಣ ನೀಡಬೇಕು ಎಂಬುದರ ಮಾಹಿತಿಯು ಈ ಕೃತಿ ಒಳಗೊಂಡಿದೆ.
©2025 Book Brahma Private Limited.