ಮನೋವೈದ್ಯ ಡಾ. ಸಿ.ಆರ್. ಚಂದ್ರಶೇಖರ ಅವರ ಕೃತಿ-40-60ರ ವಯಸ್ಸು ಪ್ರಕ್ಷುಬ್ಧ ಮನಸ್ಸು. ವಯಸ್ಸು 40 ರಿಂದ 60 ರ ಅವಧಿವರೆಗಿನ ವಯಸ್ಸನ್ನು ಮಧ್ಯ ವಯಸ್ಸು ಎಂದು ಕರೆಯುತ್ತಾರೆ. ವಯಸ್ಕ ವಯಸ್ಸನ್ನು ಕಳೆದುಕೊಳ್ಳುತ್ತಾ ವೃದ್ದಾಪ್ಯದತ್ತ ಸಾಗುತ್ತಿರುವ ಅವಧಿಯು ವ್ಯಕ್ತಿಯನ್ನು ಅವ್ಯಕ್ತವಾದ ಭಯ ಆವರಿಸಿಕೊಳ್ಳುತ್ತದೆ. ವೃದ್ದಾಪ್ಯಕ್ಕೆ ಹೊಂದಿಕೊಳ್ಳಲು ಮುಂಜಾಗ್ರತೆ ಕೈಗೊಳ್ಳುವತ್ತ ಆತ ಯೋಚಿಸುತ್ತಾನೆ. ಇದು ಅನಿವಾರ್ಯವೂ ಹೌದು. ಇಂತಹ ಸಂಗತಿಗಳತ್ತ ಓದುಗರನ್ನು ಸೆಳೆಯುವ ಕೃತಿ ಇದು.
ಡಾ. ಸಿ.ಆರ್. ಚಂದ್ರಶೇಖರ್ ಅಂತಾರಾಷ್ಟ್ರೀಯ ಖ್ಯಾತಿ ಪಡೆದಿರುವ ರಾಷ್ಟ್ರೀಯ ಮನೋರೋಗ ಮತ್ತು ನರವಿಜ್ಞಾನ ಸಂಸ್ಥೆಯಲ್ಲಿ ಉಪ ಆರೋಗ್ಯ ಅಧೀಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮನೋವಿಜ್ಞಾನ ಕ್ಷೇತ್ರದಲ್ಲಿ ಸಾಮಾಜಿಕ ಕಳಕಳಿಯುಳ್ಳ ಹಿರಿಯ ವೈದ್ಯರು ರೋಗಿಗಳ ಶುಶ್ರೂಷೆ, ಬೋಧನೆ ಮತ್ತು ತರಬೇತಿ ನೀಡುತ್ತಿರುವುದರ ಜೊತೆಗೆ ಕಳೆದ 30 ವರ್ಷಗಳಿಂದ ನಿರಂತರ ಸೇವೆ ಸಲ್ಲಿಸುತ್ತಿದ್ದಾರೆ. 150 ಕ್ಕೂ ಹೆಚ್ಚು ಮನೋವಿಜ್ಞಾನದ ಬಗ್ಗೆ ಕನ್ನಡದಲ್ಲಿ ರಚಿಸಿರುವ ಇವರ ಹಲವು ಪುಸ್ತಕಗಳು ತೆಲುಗು, ಉರ್ದು, ಗುಜರಾತಿ, ಹಿಂದಿ ಭಾಷೆಗಳಿಗೆ ಅನುವಾದಗೊಂಡಿವೆ. 1000 ಕ್ಕೂ ಹೆಚ್ಚು ಪ್ರೌಢ ಲೇಖನಗಳನ್ನು ಬರೆದಿದ್ದಾರೆ. ...
READ MORE