ಮನೋವೈದ್ಯ ಡಾ. ಸಿ.ಆರ್. ಚಂದ್ರಶೇಖರ ಅವರ ಕೃತಿ-ಯುವಜನರ ಸಮಸ್ಯಾತ್ಮಕ ಮಾತು-ವರ್ತನೆಗಳಿಗೆ ಪರಿಹಾರವೇನು?. ವಯೋಸಹಜವಾಗಿ ಯುವಕರು ತಮ್ಮದೇ ವೈಚಾರಿಕ ಹಾಗೂ ಭಾವನಾತ್ಮಕ ಜಗತ್ತನ್ನು ಹೊಂದಿರುತ್ತಾರೆ. ಇದನ್ನು ಅರ್ಥ ಮಾಡಿಕೊಳ್ಳದ ಪಾಲಕರು ಅಪಾರ್ಥ ಕಲ್ಪಿಸಿ ತಮ್ಮ ಮಕ್ಕಳ ಬಗ್ಗೆ ಸಲ್ಲದ ಆಲೋಚನೆ ಮಾಡಿಕೊಳ್ಳುತ್ತಾರೆ. ಇದರಿಂದ ಸಮಸ್ಯೆಗಳ ಉದ್ಭವ ವಾಗುತ್ತವೆ. ಯುವಜನರ ಮಾತು-ವರ್ತನೆಗಳು ಪಾಲಕರಿಗೆ ವಿಚಿತ್ರ ಎಂಬಂತೆ ತೋರುತ್ತವೆ. ಮಕ್ಕಳೊಂದಿಗೆ ಸೌಹಾರ್ದಯುತ ಸಂಬಂಧ ಇರದಿದ್ದರೆ ಇಂತಹ ಸಮಸ್ಯೆಗಳು ಇನ್ನೂ ಹೆಚ್ಚುತ್ತವೆ. ಈ ಹಿನ್ನೆಲೆಯಲ್ಲಿ, ಮನೋವೈದ್ಯರಾದ ಲೇಖಕರು ಪಾಲಕರಿಗೆ ಹಾಗೂ ಯುವ ಜನರಿಗೂ ಕೆಲ ಸಲಹೆಗಳನ್ನು ನೀಡಿರುವ ಅಂಶಗಳು ಈ ಕೃತಿಯಲ್ಲಿವೆ.
©2024 Book Brahma Private Limited.