ಮನೋವೈದ್ಯ ಡಾ. ಸಿ.ಆರ್. ಚಂದ್ರಶೇಖರ ಅವರ ಕೃತಿ-ಇಂದಿನ ಸಮಾಜದ ಪಿಡುಗು, ದಾಂಪತ್ಯ ವಿರಸ; ಸಂಧಾನವೇ? ವಿಚ್ಛೇದನೆಯೇ?. ಮದುವೆಯಾಗಿ ಬಹುವರ್ಷಗಳ ಕಾಲ ಕೂಡಿ ಸಂಸಾರ ನಡೆಸುವ ದಂಪತಿಗಳು ಕಡಿಮೆಯಾಗುತ್ತಿದ್ದಾರೆ. ಮದುವೆಯಾಗಿ ಒಂದೆರಡು ವರ್ಷದಲ್ಲೇ ವಿಚ್ಛೇದನೆ ನೀಡುವ ಪ್ರವೃತ್ತಿ ಹೆಚ್ಚುತ್ತಿದೆ. ದಾಂಪತ್ಯ ವಿರಸವು ಸಂಧಾನದಿಂದ ಬಗೆಹರಿಸಿಕೊಳ್ಳಬೇಕು. ಅದು ವಿಚ್ಛೇದನೆಗೆ ಕಾರಣವಾದರೆ ಸಂಸಾರದ ಮೇಲೆ ಗಂಭೀರ ಪರಿಣಾಮ ಬೀರಬಹುದು. ಸಣ್ಣ ಸಣ್ಣ ಮಕ್ಕಳಿದ್ದರಂತೂ ಪರಿಣಾಮಕತೆಯ ಭೀಕರತೆ ಹೆಚ್ಚಿರುತ್ತದೆ. ಆದ್ದರಿಂದ, ಸಂಸಾರದಲ್ಲಿ ವಿರಸ ಹೆಚ್ಚುತ್ತಿದ್ದು, ಅದಕ್ಕೆ ಕಾರಣಗಳು, ಪರಿಹಾರಗಳು ಮನಸ್ಥಿತಿಗಳನ್ನು ಹೇಗೆ ನಿಭಾಯಿಸಿಕೊಳ್ಳಬೇಕು ಎಂಬಿತ್ಯಾದಿ ಅಂಶಗಳ ಬಗ್ಗೆ ಮನೋವೈದ್ಯರಾದ ಲೇಖಕರು ಕೆಲವು ಸಲಹೆಗಳನ್ನು ನೀಡಿದ್ದು ಈ ಕೃತಿಯ ವೈಶಿಷ್ಟ್ಯ.
©2025 Book Brahma Private Limited.