ಡಾ. ಜಿ. ಫ್ರಾನ್ಸಿಸ್ ಜ್ಸೆವಿಯರ್ ಅವರ ಆಂಗ್ಲ ಕೃತಿಯನ್ನು ಹಿರಿಯ ಸಾಹಿತಿ ಕೆ.ಎಂ. ರಾಘವ್ ನಂಬಿಯಾರ್ ಅವರು ‘ನಿಮ್ಮ ಮಿದುಳಿನ ಶಕ್ತಿ ಹೆಚ್ಚಿಸುವ ಯುಕ್ತಿ’ ಶೀರ್ಷಿಕೆಯಡಿ ಕನ್ನಡಕ್ಕೆ ಅನುವಾದಿಸಿದ್ದಾರೆ. ಮಿದುಳನ್ನು ಪ್ರಚೋದಿಸುವ ಯಶಸ್ವಿ ತಂತ್ರಗಳನ್ನು ಇಲ್ಲಿ ಚರ್ಚಿಸಲಾಗಿದೆ. ದೇಹ ಮತ್ತು ಮನಸ್ಸು -ಈ ಎರಡರ ಅನ್ಯೋನ್ಯ ಸಂಬಂಧ ಕುರಿತು ವಿಸ್ತೃತವಾಗಿ ವಿವರಿಸಲಾಗಿದೆ.
ಹಿರಿಯ ಲೇಖಕರದ ಕೆ.ಎಂ. ರಾಘವ ನಂಬಿಯಾರ್ ಅವರು ಕೇರಳದ ಕಣ್ಣಾನೂರಿನ ರಾಮಂತಳಿಯಲ್ಲಿ 1946 ಡಿಸೆಂಬರ್ 7ರಂದು ಜನಿಸಿದರು. ಮೈಸೂರು ಮುಕ್ತ ವಿಶ್ವವಿದ್ಯಾಲಯದಿಂದ ಸಂಸ್ಕೃತ ಪದವಿ ಪಡೆದ ಇವರು ‘ಕರಾವಳಿಯ ಯಕ್ಷಗಾನದ ಹಿಮ್ಮೇಳ: ಒಮದು ಸಮಗ್ರ ಅಧ್ಯಯನ’ ಪ್ರಬಂಧ ಮಂಡಿಸಿ ಮಂಗಳೂರು ವಿಶ್ವವಿದ್ಯಾಲಯದಿಂದ ಪಿಎಚ್‌ಡಿ ಪದವಿ ಪಡೆದರು. ಉದಯವಾಣಿ ದಿನಪತ್ರಿಕೆಯ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. ಮದ್ದಳೆಯ ಮಾಯಾಲೋಕ, ವಿಲೋಕನ, ತಿಳಿನೋಟ, ದೀವಟಿಗೆ, ಚಿನ್ನದ ತಾಳ, ಹಿಮ್ಮೇಳ, ಮುಂದಲೆ, ಯಾಜಿ ಭಾಗವತರು, ಯಕ್ಷ ಸೇಚನ ಮುಂತಾದವು ಇವರ ಪ್ರಮುಖ ಕೃತಿಗಳು. ಇವರಿಗೆ ಕೆರೆಮನೆ ಶಂಭು ಹೆಗಡೆ ಪ್ರಶಸ್ತಿ, ವಿಶುಕುಮಾರ್ ಪ್ರಶಸ್ತಿ, ಜೀಶಂಪ ...
READ MORE