ಸೈಕಲಾಜಿಕಲ್ ಕಾಂಪ್ಲೆಕ್ಸ್ ಗಳು- ಕನ್ನಡದಲ್ಲಿ ಮನಃಶಾಸ್ತ್ರ ವಿಷಯವನ್ನು ಕುರಿತು ಅನೇಕ ಕೃತಿಗಳನ್ನು ಹೊರತಂದ ಎಂ.ಬಸಣ್ಣನವರ ಕೃತಿ. ಈ ಕೃತಿಯು ಸೈಕಾಲಜಿಕಲ್ ಕಾಂಪ್ಲೆಕ್ಸ್ ಗಳು, ಈಡಿಪಸ್ ಕಾಂಪ್ಲೆಕ್ಸ್, ಎಲೆಕ್ಟ್ರಾ ಕಾಂಪ್ಲೆಕ್ಸ್, ಕ್ಲೈಟೆಮ್ನೆಸ್ಟ್ರಾ ಕಾಂಪ್ಲೆಕ್ಸ್, ಅಡೊನಿಸ್ ಕಾಂಪ್ಲೆಕ್ಸ್, ಅಂತಿಗೊನೆ ಕಾಂಪ್ಲೆಕ್ಸ್, ಕೆಯ್ನ್ ಕಾಂಪ್ಲೆಕ್ಸ್, ಸಿಂಡರೆಲ್ಲಾ ಕಾಂಪ್ಲೆಕ್ಸ್, ಲಾಟ್ ಕಾಂಪ್ಲೆಕ್ಸ್, ಗ್ರಿಸೆಲ್ಡಾ ಕಾಂಪ್ಲೆಕ್ಸ್, ಮೀಡಿಯಾ ಕಾಂಪ್ಲೆಕ್ಸ್, ಜೊಕಾಸ್ಟಾ ಕಾಂಪ್ಲೆಕ್ಸ್ ಮತ್ತು ಫೀಡ್ರಾ ಕಾಂಪ್ಲೆಕ್ಸ್, ಐಕಾರಸ್ ಕಾಂಪ್ಲೆಕ್ಸ್, ಬವೇರಿಸಮ್, ಕ್ಲಿಯೊಪಾತ್ರ ಕಾಂಪ್ಲೆಕ್ಸ್, ಪೀಟರ್ ಪ್ಯಾನ್ ಕಾಂಪ್ಲೆಕ್ಸ್, ಲೊಲಿಟಾ ಕಾಂಪ್ಲೆಕ್ಸ್, ಮೆಡೊನ್ನಾ-ಹೋರ್ ಕಾಂಪ್ಲೆಕ್ಸ್, ಕೆಸಾಂಡ್ರಾ ಕಾಂಪ್ಲೆಕ್ಸ್, ಇತರ ಕಾಂಪ್ಲೆಕ್ಸ್ ಅನ್ನುವಂತಹ 21 ಅನುಕ್ರಮಗಳನ್ನು ಹೊಂದಿದೆ. ಕೃತಿಗೆ ಮುನ್ನುಡಿ ಬರೆದಿರುವ ಬಸವರಾಜ ಕಲ್ಗುಡಿ ಅವರು, ಕನ್ನಡದಲ್ಲಿ ಸುಲಲಿತವಾಗಿ ಮಾತನಾಡಬಲ್ಲ, ಹಾಗೂ ತಮ್ಮ ಮಾತು ಹಾಗೂ ಬರಹದ ಮೂಲಕ ಕರ್ನಾಟಕದ ತುಂಬ ಖ್ಯಾತಿಯನ್ನು ಪಡೆದ ಬಸವಣ್ಣನವರ ಈ ಕೃತಿ ಮನಃಶಾಸ್ತ್ರದ ವಿಷಯವನ್ನು ಸಾಹಿತ್ಯದೊಂದಿಗೆ ವಿವರಿಸುತ್ತದೆ. ಪಶ್ಚಿಮದ ಸಾಹಿತ್ಯವನ್ನು ಓದಿದ ಸಾಹಿತ್ಯಾಸಕ್ತರಿಗೆ ಈಡಿಪಸ್, ಎಲೆಕ್ಟ್ರಾ ಕಾಂಪ್ಲೆಕ್ಸ್ ಗಳು ಹೆಚ್ಚು ಪರಿಚಿತ. ಆದರೆ ಅಷ್ಟೊಂದು ಪ್ರಸಿದ್ಧವಲ್ಲದ ಇಪ್ಪತ್ತಕ್ಕೂ ಹೆಚ್ಚು ಕಾಂಪ್ಲೆಕ್ಸ್ ಗಳು ಜನರ ನಡುವೆ ಮನೋವಿಜ್ಞಾನದ ಒಂದು ವಲಯದಲ್ಲಿ ಬಳಕೆಯಲ್ಲಿ ಇರುವುದನ್ನೂ ಬಸವಣ್ಣನವರು ಈ ಕೃತಿಯಲ್ಲಿ ವಿವರಿಸಿದ್ದಾರೆ. ಪ್ರಮುಖ ಕೃತಿಗಳ ಅಧ್ಯಯನ ಹಾಗೂ ಪರಿಶೀಲನವು ಈ ಕೃತಿಯನ್ನು ಹೆಚ್ಚು ಪ್ರಸ್ತುತಗೊಳಿಸಿವೆ. ಕನ್ನಡಕ್ಕೆ ಸರಳ ತಿಳಿಯಾದ ಭಾಷೆಯಲ್ಲಿ ಸೂಕ್ಷ್ಮವಾದ ಮನೋವಿಶ್ಲೇಷಣೆಯ ವಿವರಗಳು ಬಸವಣ್ಣನವರ ಈ ಕೃತಿಯ ಮೂಲಕ ದಕ್ಕಿವೆ ಎಂದೇ ಹೇಳಬಹುದು.ಕಾಂಪ್ಲೆಕ್ಸ್ ಎನ್ನುವ ಪರಿಕಲ್ಪನೆಯು ಶುದ್ಧಮನೋವಿಜ್ಞಾನದಲ್ಲಿ ಬಳಕೆಯಲ್ಲಿ ಇಲ್ಲ ಎನ್ನುವ ಮಾತನ್ನು ಬಸವಣ್ಣನವರು ಹೇಳುತ್ತಾ-ಇದು ಮನೋವಿಜ್ಞಾನದ ಒಂದು ಶಾಖೆಯಾದ ಡೆಪ್ತ್ ಸೈಕಾಲಜಿ ಮತ್ತು ಮನೋವಿಶ್ಲೇಷಣೆಯ ಸೈಕೋ ಅನಾಲಿಸಿಸ್ ವಿಭಾಗದಲ್ಲಿ ಚರ್ಚಿತವಾಗಿರುದನ್ನು ಗುರುತಿಸುತ್ತಾರೆ. ಸಿಗ್ಮಂಡ್ ಫ್ರಾಯ್ಡ್, ಕಾರ್ಲ್ ಯೂಂಗ್ ಹಾಗೂ ಆಡ್ಲರ್ ಹಾಗೂ ಅವರ ಅನುಯಾಯಿಗಳಲ್ಲಿ ಹೆಚ್ಷು ಪರಿಕಲ್ಪನೆ ಇದು ಎಂದಿದ್ದಾರೆ.
©2024 Book Brahma Private Limited.