ಲೇಖಕಿ ಎ.ಪಿ. ಮಾಲತಿ ಅವರು ಮಕ್ಕಳ ಲಾಲನೆ-ಪಾಲನೆ-ಆರೋಗ್ಯ ಕುರಿತು ಬರೆದ ಕೃತಿ-ಮಕ್ಕಳ ಪಾಲನೆ. ಜನನಪೂರ್ವ ತಯಾರಿ, ತಂದೆ-ತಾಯಿಯ ಪಾತ್ರ, ಶಿಶು ಆರೈಕೆ, ಹೆದರಿಕೆ ಮತ್ತು ಅಪಾಯದಿಂದ ಮಕ್ಕಳ ರಕ್ಷಣೆ, ಕಿಶೋರ ವಯಸ್ಸು, ಅಂಗವಿಕಲರು, ಅನಾಥ ಮಕ್ಕಳು ಹಾಗೂ ದತ್ತುಪುತ್ರ ಹೀಗೆ ಬೆಳವಣಿಗೆಯ ಹಂತದ ಮಹತ್ವದ ಅಂಶಗಳನ್ನು ಅಧ್ಯಾಯಗಳಾಗಿಸಿ ತಮ್ಮ ವಿಚಾರಗಳ ಪಾಲಕರಿಗೆ ಸಲಹೆ ನೀಡಿದ್ದಾರೆ. ಇಲ್ಲಿಯ ಕೆಲವು ಅಧ್ಯಾಯಗಳು ಸುಧಾ ವಾರಪತ್ರಿಕೆ ಹಾಗೂ ವನಿತಾ ಮಾಸಪತ್ರಿಕೆಯಲ್ಲಿ ಪ್ರಕಟಗೊಂಡಿವೆ.
©2024 Book Brahma Private Limited.