‘ಸ್ವಲ್ಪ ಮಾತಾಡಿ ಪ್ಲೀಸ್’ ಮನೋವೈದ್ಯ, ಲೇಖಕ ವಿರೂಪಾಕ್ಷ ದೇವರಮನೆ ಅವರ ಕೃತಿ. ಒಂದು ಸಂಬಂಧ ಬೆಳೆದು ಗಟ್ಟಿಗೊಳ್ಳಬೇಕಾದ್ರೆ ವರ್ಷಗಳೇ ಹಿಡಿಯುತ್ತೆ. ಆದರೂ ಅದು ಉಳಿದು ಇನ್ನಷ್ಟು ಸಧೃಡವಾಗಬೇಕಾದ್ರೆ ನಿರಂತರ ಪ್ರೀತಿ, ವಿಶ್ವಾಸ, ಮುಖ್ಯವಾಗಿ ಮಾತುಗಳು ಬೇಕು. ಎಲ್ಲ ಸಂಬಂಧಗಳನ್ನು ಜೀವಂತವಾಗಿಡಬಲ್ಲ ದಿವ್ಯಶಕ್ತಿ ಇರುವುದು ಈ ಮಾತುಗಳಿಗೆ ಮಾತ್ರ. ಅಂಥಹ ಮಾತುಗಳೇ ಇರದ ಬರಡು ವಾತಾವರಣದಲ್ಲಿ ಸಂಬಂಧಗಳ ಕೊಂಡಿಗಳು ಶಿಥಿಲಗೊಂಡು ಒಂದೊಂದಾಗಿ ಕಳಚಿಕೊಳ್ಳುತ್ತಾ ಒಂದು ದಿನ ನಾವು ಅಕ್ಷರಶಃ ಒಂಟಿಯಾಗಿ ಬಿಡುತ್ತೇವೆ. ಸಮಸ್ಯೆಗಳ ಕಾರಣಗಳು ಏನೇ ಇರಲಿ, ಆದರೆ ಪರಿಹಾರ ಒದಗಿಸುವ ಬೀಜಮಂತ್ರ ಒಂದೇ ಅದು ಮಾತು. ಮಾತು ಮನೆ ಕೆಡಿಸೀತು ಅಂತಾರೆ ಆದರೆ ಮಾತೇ ಆಡದಿದ್ದರೆ ನಾವೇ ಪ್ರೀತಿಯಿಂದ ಕಟ್ಟಿದ ಸಂಬಂಧಗಳ ಸೌಧಗಳು ನಮ್ಮ ಕಣ್ಣೆದುರಲ್ಲೇ ಕುಸಿದು ಹೋಗುವುದು ನಿಶ್ಚಿತ. ಮಾತಿನ ಮಹಿಮೆ ಏನೆೆಂದು ತಿಳಿಸಿಕೊಡುವುದೇ ಈ ಪುಸ್ತಕದ ಉದ್ದೇಶ. ಸಂಬಂಧಗಳ ಸೂಕ್ಷ್ಮತೆಯ ಬಗ್ಗೆ ಮನೋವೈದ್ಯರಾದ ವಿರೂಪಾಕ್ಷ ದೇವರಮನೆ ವಿವರವಾಗಿ ಬರೆದಿದ್ದಾರೆ.
©2025 Book Brahma Private Limited.